ರಸ್ತೆ ವಿಭಜಕ ಮಧ್ಯೆ ಗಾಂಜಾ ಗಿಡ !

ಮಂಗಳವಾರ, ಮೇ 21, 2019
24 °C

ರಸ್ತೆ ವಿಭಜಕ ಮಧ್ಯೆ ಗಾಂಜಾ ಗಿಡ !

Published:
Updated:

ಹುಮನಾಬಾದ್: ಪಟ್ಟಣದ ಸೌಂದರ್ಯದ ಏಕೈಕ ಉದ್ದೆಶದಿಂದ ರಸ್ತೆ ವಿಭಜಕ ಮಧ್ಯೆ ಅಲಂಕೃತ ಗಿಡ ನೆಡುವುದನ್ನು ಕೇಳಿದ್ದಲ್ಲದೆ ನೋಡಿಯೂ ಇದ್ದೆವೆ. ಆದರೇ ಅದೇ ಸ್ಥಳದಲ್ಲಿ ಗಾಂಜಾ ಗಿಡಗಳು ಇರುವುದನ್ನು ಎಲ್ಲಿಯೂ ಕೇಳಿಯೂ ಇಲ್ಲ ನೋಡಿಯೂ ಇಲ್ಲ.ರಸ್ತೆ ವಿಭಜಕ ವಿಷಯದಲ್ಲಿ ಹುಮನಾಬಾದ್ ಕೊಂಚ ಭಿನ್ನವಾಗಿದೆ. ಯಾಕೆಂದರೇ ಬೇರೆ ಯಾವುದೇ ಪಟ್ಟಣದ ರಸ್ತೆ ವಿಭಜಕಗಳಲ್ಲಿ ಸಿಗದ ಗಾಂಜಾ ಗಿಡಗಳು ಸಾಕಷ್ಟು ಗುಂಡಿಗಳ ಮಧ್ಯೆ ನೋಡುವುದಕ್ಕೆ  ಸಿಗುತ್ತವೆ.

ಬಲ್ಲ ಮೂಲಗಳ ಪ್ರಕಾರ ಒಂದು ತಿಂಗಳ ಹಿಂದೆಯಷ್ಟೇ ವಿಭಜಕದ ಅರ್ಧಕ್ಕೂ ಅಧಿಕ ಗುಂಡಿಗಳಲ್ಲಿ ಈ ಸಸಿ ಕಂಡಿದ್ದವು. ಈಚೆಗಷ್ಟೇ ಇವುಗಳ ಸಂಖ್ಯೆ ಕಡಿಮೆ ಆಗಿವೆ ಎನ್ನುವುದು ಕಣ್ಣಾರೆ ಕಂಡವರ ಅಭಿಪ್ರಾಯ.ವಿಭಜಕದಲ್ಲಿ ನೆಟ್ಟ ಬೇರೆ ಗಿಡಗಳ ಸ್ಥಿತಿ ಮೇಲ್ನೊಟಕ್ಕೆ ಗಂಭೀರ  ಕಾಣುತ್ತದೆ. ಹಾಗೆಂದು ಅದೇ ಸ್ಥಿತಿ ಗಾಂಜಾ ಗಿಡಗಳಿಗೂ ಎದೆ ಎಂದು ಭಾವಿಸಿದರೇ ಖಂಡಿತಾ ತಪ್ಪಾಗುತ್ತೆ ! ಏಕೆಂದರೇ ಬೇರೆ ಎಲ್ಲ ಗಿಡಗಳಿಂದ ಈ ಗಿಡಗಳು ಉತ್ತಮವಾಗಿ ಬೆಳೆಯುತ್ತಿವೆ.ಆದರೇ ಈ ಸಸಿಗಳು ರಸ್ತೆ ವಿಭಜಕ ಮಧ್ಯೆ ಹೇಗೆ ಬಂದವು. ಬಂದರೂ ಸ್ವಚ್ಛತೆ ಸಂದರ್ಭದಲ್ಲಿ ಯಾರೊಬ್ಬರ ಕಣ್ಣಿಗೂ ಕಂಡಿಲ್ಲವೋ ಹೇಗೆ ? ಎಂಬ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆಯುತ್ತಿದೆ.ಸಾರ್ವಜನಿಕರ ಹೇಳಿಕೆ ಮೇರೆಗೆ  ಶುಕ್ರವಾರ ವೀಕ್ಷಿಸಲು ಹೋದಾಗ ಡಿಸಿಸಿ ಬ್ಯಾಂಕ್ ಎದುರಿಗೆ ಇರುವ ರಸ್ತೆವಿಭಜಕ ಮತ್ತು ಸ್ವಲ್ಪ ಅಂತರಲ್ಲಿ ಇರುವ ಎರಡು ಗುಂಡಿಗಳಲ್ಲಿ ಗಿಡ ಇರುವುದು ಕಂಡುಬಂತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry