ಬುಧವಾರ, ಆಗಸ್ಟ್ 21, 2019
28 °C

ರಸ್ತೆ ವಿಸ್ತರಣೆ ಕಾರ್ಯ ಅನಿವಾರ್ಯ: ಲಿಂಬಾವಳಿ

Published:
Updated:

ವೈಟ್‌ಫೀಲ್ಡ್: ಇಲ್ಲಿಗೆ ಸಮೀಪದ ವರ್ತೂರು ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಉದ್ದೇಶಿತ ದೊಮ್ಮಸಂದ್ರ- ಹೊಸಕೋಟೆ ರಸ್ತೆ ವಿಸ್ತರಣೆ ಕಾರ್ಯ ಅನಿವಾರ್ಯ ಆಗಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಶಿಥಿಲಾವಸ್ಥೆಯ ವರ್ತೂರು ಕೆರೆ ಸೇತುವೆ ಕಾಮಗಾರಿಯನ್ನು ಶನಿವಾರ ಪರಿಶೀಲನೆ ನಡೆಸಿ ಮಾತನಾಡಿದರು.2001-2002ರಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದ ಈ ಸೇತುವೆ ಶಿಥಿಲ ಆಗಿರುವ ಕಾರಣ ನೂತನ ಸೇತುವೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ಸ್ ಸಿಟಿ-ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನೂತನ ರಸ್ತೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದು, ತಾತ್ವಿಕ ಒಪ್ಪಿಗೆ ದೊರಕಿದೆ. ಈ ಯೋಜನೆಗೆ 900 ಕೋಟಿ ರೂಪಾಯಿ ಅಂದಾಜು ಮಾಡಲಾಗಿದೆ ಎಂದರು.

Post Comments (+)