ಬುಧವಾರ, ನವೆಂಬರ್ 20, 2019
21 °C

ರಸ್ತೆ ಶುಚಿಗೂ ಕ್ಯಾಮೆರಾ

Published:
Updated:

ಇಂಗ್ಲೆಂಡ್‌ನ ಖಾಸಗಿ ಪತ್ತೇದಾರಿಯೊಬ್ಬ ರಸ್ತೆಗಳನ್ನು ಶುಚಿಯಾಗಿಡಲೆಂದು ನಿರ್ದಿಷ್ಟ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ. ಸಾಕುನಾಯಿಗಳು ರಸ್ತೆ ಮೇಲೆ ಗಲೀಜು ಮಾಡಿದರೆ, ಅದನ್ನೆತ್ತಿ ಕಸದ ಬುಟ್ಟಿಗೆ ಹಾಕುವುದು ಅಲ್ಲಿ ಕಡ್ಡಾಯ.ಯಾರು ಹಾಕುತ್ತಿರಲಿಲ್ಲವೋ ಅವರೆಲ್ಲಾ ಕ್ಯಾಮೆರಾದಲ್ಲಿ ದಾಖಲಾದರು. ಅಂಥವರಿಗೆ ಕರೆದು ಬುದ್ಧಿ ಹೇಳಿದ ಮೇಲೆ ರಸ್ತೆ ಮತ್ತೆ ಮಿರಮಿರ ಮಿಂಚತೊಡಗಿತು.

ಪ್ರತಿಕ್ರಿಯಿಸಿ (+)