ಸೋಮವಾರ, ನವೆಂಬರ್ 18, 2019
20 °C

ರಸ್ತೆ ಸರಿಪಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ

Published:
Updated:

ನಾಪೋಕ್ಲು: ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದಲ್ಲಿ ಸರಿಯಾದ ರಸ್ತೆ ನಿರ್ಮಿಸದ ಸರ್ಕಾರದ ವಿರುದ್ಧ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಕೊಳಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3.5 ಕಿ.ಮೀ. ರಸ್ತೆಯನ್ನು ದುರಸ್ತಿಪಡಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.ಹೊಸ ರಸ್ತೆ ನಿರ್ಮಾಣಕ್ಕೆ ಗ್ರಾಮ ಸಡಕ್ ಯೋಜನೆಯಡಿ ರೂ.1.84 ಕೋಟಿ ಬಿಡುಗಡೆಯಾಗಿದೆ ಎಂದು ಹೇಳಲಾಗಿದ್ದರೂ ಇನ್ನೂ ರಸ್ತೆ ನಿರ್ಮಾಣವಾಗಿಲ್ಲ. ರಸ್ತೆಯು ಜನಸಂಚಾರ ಅಸಾಧ್ಯವೆನ್ನುವಷ್ಟು ಹದಗೆಟ್ಟಿದೆ ಎಂದು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕಾಯಂಡ ಸುಬ್ಬಯ್ಯ, ಮಾಜಿ ಅಧ್ಯಕ್ಷ ಕುಂಡ್ಯೋಳಂಡ ಮಾದಪ್ಪ, ಕಲಿಯಂಡ ಹ್ಯಾರಿ ಮಂದಣ್ಣ. ಕಲ್ಲಂದೀರ ಬೆಳ್ಯಪ್ಪ, ಕುಂಡ್ಯೋಳಂಡ ಮುದ್ದಪ್ಪ, ವಿಶುಪೂವಯ್ಯ, ಕೆ.ಎ. ತಮ್ಮಯ್ಯ, ಕಲಿಯಂಡ ವಿಠಲ ಮುದ್ದಯ್ಯ, ಕುಂಡ್ಯೋಳಂಡ ಗಣೇಶ್ ಮುತ್ತಪ್ಪ ದೂರಿದರು.ಸೂಕ್ತ ರಸ್ತೆ ನಿರ್ಮಾಣ ಮಾಡದಿದ್ದರೆ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಲ್ಲದೇ ಗ್ರಾಮ ವ್ಯಾಪ್ತಿಯಲ್ಲಿ ಮತಗಟ್ಟೆ ತೆರೆಯಲೂ ಅವಕಾಶ ಕಲ್ಪಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)