ರಹಸ್ಯ ದಾಖಲೆಗಳನ್ನು ಕಸದ ಡಬ್ಬಿಗೆ ಸುರಿದ ಬ್ರಿಟನ್ ಸಚಿವ

7

ರಹಸ್ಯ ದಾಖಲೆಗಳನ್ನು ಕಸದ ಡಬ್ಬಿಗೆ ಸುರಿದ ಬ್ರಿಟನ್ ಸಚಿವ

Published:
Updated:

ಲಂಡನ್ (ಪಿಟಿಐ): ಬ್ರಿಟನ್ ಸಚಿವರೊಬ್ಬರು ಗುಪ್ತದಳದ ಟಿಪ್ಪಣಿಗಳು ಸೇರಿದಂತೆ ರಹಸ್ಯ ದಾಖಲೆಗಳನ್ನು ಸಾರ್ವಜನಿಕ ಕಸದ ಡಬ್ಬಿಗೆ ಕಂತೆಕಂತೆಯಾಗಿ ಎಸೆಯುತ್ತಿದ್ದುದು ಬಹಿರಂಗಗೊಂಡಿದೆ. ಈಗಾಗಲೇ ಹಲವು ಮುಜುಗರಗಳಿಗೆ ಸಿಲುಕಿರುವ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರನ್ನು ಇದು ಮತ್ತಷ್ಟು ಸಂದಿಗ್ಧಕ್ಕೆ ಸಿಲುಕಿಸಿದೆ.ಪ್ರಧಾನಿ ನಿವಾಸಕ್ಕೆ ಕೂಗಳತೆ ದೂರದಲ್ಲಿರುವ ಸೇಂಟ್ ಜೇಮ್ಸ ಉದ್ಯಾನದಲ್ಲಿ ಸಚಿವ ಒಲಿವರ್ ಲೆಟ್ವಿನ್ ದಾಖಲೆಗಳನ್ನು ಸುರಿಯುತ್ತಿದ್ದುದನ್ನು ಟ್ಯಾಬ್ಲಾಯ್ಡ ಪತ್ರಿಕೆಯೊಂದು ಸೆರೆಹಿಡಿದಿದೆ. ಲೆಟ್ವಿನ್ ಕ್ಯಾಮರಾನ್ ನಿಕಟವರ್ತಿಯಾಗಿದ್ದು, ಸರ್ಕಾರದ ಉನ್ನತ ಮಟ್ಟದಲ್ಲಿ ಪ್ರಭಾವ ಹೊಂದಿದ್ದಾರೆ.ಭಯೋತ್ಪಾದನೆ, ರಾಷ್ಟ್ರೀಯ ಭದ್ರತೆ ಮತ್ತಿತರ ಸೂಕ್ಷ್ಮ ಸಂಗತಿಗಳಿಗೆ ಸೇರಿದ ಮಾಹಿತಿಗಳು ಈ  ದಾಖಲೆಗಳಲ್ಲಿ ಇವೆ ಎನ್ನಲಾಗಿದೆ. ಅಲ್‌ಖೈದಾ ಉಗ್ರ ಸಂಘಟನೆ ಹಾಗೂ ಪಾಕ್ ನಡುವಿನ ಸಂಪರ್ಕ ಕುರಿತ ಗುಪ್ತದಳದ ಮಾಹಿತಿಗಳೂ ಇದರಲ್ಲಿ ಸೇರಿವೆ.ಕ್ಷಣಾ ಸಚಿವ ಲಿಯಾಂ ಫಾಕ್ಸ್ ತಮ್ಮ ಗೆಳೆಯನನ್ನು ಶ್ರೀಲಂಕಾಕ್ಕೆ ಅಧಿಕೃತವಾಗಿ ಕರೆದುಕೊಂಡು ಹೋಗಿದ್ದ ವಿವಾದದ ಕಾವು ತಣ್ಣಗಾಗುವ ಮುನ್ನವೇ ಈ ಪ್ರಕರಣ ಬೆಳಕಿಗೆ ಬಂದಿದೆ.55 ವರ್ಷದ ಲೆಟ್ವಿನ್ ಕಸದ ಡಬ್ಬಿಗೆ ದಾಖಲೆಗಳನ್ನು ಹಾಕುವ ಜತೆಗೆ ಇನ್ನಷ್ಟು ದಾಖಲೆಗಳನ್ನು ರದ್ದಿ ಸಂಗ್ರಹಿಸುವವರಿಗೂ ನೀಡಿದ್ದಾರೆ ಎಂಬ ದೂರೂ ಕೇಳಿಬಂದಿದೆ.ಆದರೆ ಸಚಿವರನ್ನು ಸಂಪುಟ ಕಾರ್ಯಾಲಯ ಸಮರ್ಥಿಸಿಕೊಂಡಿದೆ. ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲವು ಕಾರ್ಯಗಳನ್ನು ಉದ್ಯಾನದಲ್ಲಿ ಕುಳಿತು ಮಾಡುವ ಅಭ್ಯಾಸವನ್ನು ಲೆಟ್ವಿನ್ ರೂಢಿಸಿಕೊಂಡಿದ್ದಾರೆ. ಕಸದ ಡಬ್ಬಿಗೆ ಅವರು ಹಾಕಿರುವುದು ಅನುಪಯುಕ್ತ ಕಾಗದಗಳೇ ಹೊರತು ರಹಸ್ಯ ದಾಖಲೆಗಳಲ್ಲ ಎಂದು ಅದು ಸ್ಪಷ್ಟನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry