ರಾಕಿಂಗ್ ಶ್ರೇಯಾ

7

ರಾಕಿಂಗ್ ಶ್ರೇಯಾ

Published:
Updated:

ಶ್ರೇಯಾ ಘೋಷಾಲ್ ಮೊದಲ ಸಲ ರಾಕ್ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ. ಅಚ್ಚರಿಯಾಯಿತೆ?  ಶ್ರೇಯಾಗೆ ಮಧುರ ಹಾಡುಗಳು ಮಾತ್ರ ಹೇಳಿ ಮಾಡಿಸಿದಂತಿರುತ್ತವೆ. ಅವರ ಕಂಠ ಮಾಧುರ್ಯದಲ್ಲಿರುವ ಶಾಂತ ಹರಿವು ರಾಕ್‌ನ ಅಬ್ಬರದಲ್ಲಿ ಹೇಗಿರಬಹುದು ಎಂದೆಲ್ಲ ಯೋಚಿಸುತ್ತಿದ್ದರೆ, ನವೆಂಬರ್‌ವರೆಗೂ ಕಾಯಬೇಕು.ಶ್ರೇಯಾ ಘೋಷಾಲ್ `ಪ್ರೇಮ್ ಮಾಯಿ~ ಚಿತ್ರಕ್ಕಾಗಿ ರಾಕ್ ಸಂಗೀತದಲ್ಲಿ ಹಾಡಲು ಒಪ್ಪಿಕೊಂಡಿದ್ದಾರೆ. ಮೊದಮೊದಲು ಅವರು ಹಿಂಜರಿದರೂ ಸಂಗೀತ ನಿರ್ಮಾಪಕ ಅಭಿಷೇಕ್ ರೇ ಒತ್ತಾಯಕ್ಕೆ ಶ್ರೇಯಾ ಒಪ್ಪಿದ್ದಾರೆ.`ಪ್ರೇಮ್ ಮಾಯಿ~ ಚಿತ್ರದಲ್ಲಿ ಮಾಯಿ (ತಾಯಿ)ಯ ಪಾತ್ರವನ್ನು ಆಶಾ ಭೋಸ್ಲೆ ನಿರ್ವಹಿಸುತ್ತಿದ್ದಾರೆ. ಕೇವಲ ತಮ್ಮ ಹಾಡುಗಳ ವೀಡಿಯೊದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆಶಾಜಿ ಇದೇ ಮೊದಲ ಸಲ ಹಿರಿತೆರೆಯಲ್ಲಿ ನಟಿಸುತ್ತಿದ್ದಾರೆ.ಕೌಟುಂಬಿಕ ಚಿತ್ರ ಇದಾಗಿದ್ದು, ಎಲ್ಲರನ್ನೂ ಭಾವುಕಗೊಳಿಸುವ ಗುಣ ಹೊಂದಿದೆ ಎಂದು ಆಶಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ರಾಕ್ ಗೀತೆಗೆ ಶ್ರೇಯಾ ಹಾಡಲೇಬೇಕು ಎಂಬುದು ಅಭಿಷೇಕ್ ಹಟವಾಗಿತ್ತಂತೆ. `ಪಲ್ಚಿನ್~ ಎಂಬ ಹಾಡು ಜನಪ್ರಿಯವಾಗಲಿದೆ ಎಂಬುದು ಅವರ ವಿಶ್ವಾಸವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry