ಮಂಗಳವಾರ, ಜನವರಿ 28, 2020
21 °C

ರಾಕ್‌ಸ್ಟಾರ್‌ನ ಸೆಕೆಂಡ್‌ ಹ್ಯಾಂಡ್‌ ಲವ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಕ್‌ಸ್ಟಾರ್‌ನ ಸೆಕೆಂಡ್‌ ಹ್ಯಾಂಡ್‌ ಲವ್‌!

‘ಇದು ಸೆಕೆಂಡ್ ಹ್ಯಾಂಡ್ ಸಿನಿಮಾವೇ?’ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿತಾದರೂ ಹಾಗೇನೂ ಇಲ್ಲ, ಇದು ಫಸ್ಟ್ ಹ್ಯಾಂಡ್ ಸಿನಿಮಾ ಎಂದು ಸ್ಪಷ್ಟಪಡಿಸಿದರು ನಿರ್ದೇಶಕ ರಾಘವಲೋಕಿ.ತುಸು ವಿಚಿತ್ರ ಎನಿಸುವ ತಮ್ಮ ‘ಎ ಸೆಕೆಂಡ್‌ಹ್ಯಾಂಡ್ ಲವರ್’ ಶೀರ್ಷಿಕೆಯನ್ನೂ ಅವರು ಸಮರ್ಥಿಸಿಕೊಂಡರು. ವಸ್ತುಗಳು ಸೆಕೆಂಡ್ ಹ್ಯಾಂಡ್ ಆಗುವುದು ಸಹಜ. ಪ್ರೇಮಿಗಳೂ ಸೆಕೆಂಡ್ ಹ್ಯಾಂಡ್ ಇರುತ್ತಾರೆಯೇ? ಎಂದು ಕೇಳಿದರೆ, ಮೊದಲ ಪ್ರೀತಿ ಕೈಜಾರಿದ ಬಳಿಕ ಮತ್ತೊಂದು ಪ್ರೀತಿ ದಕ್ಕಿದರೂ ಅಷ್ಟರಲ್ಲಿ ನಾವು ಸೆಕೆಂಡ್ ಹ್ಯಾಂಡ್‌ಗಳಾಗಿರುತ್ತೇವೆ ಅಲ್ಲವೇ ಎಂಬ ಉತ್ತರ ಅವರದು.‘ಸೆಕೆಂಡ್ ಹ್ಯಾಂಡ್...’ ಸಿನಿಮಾ ಬೇರೆ ಚಿತ್ರದಿಂದ ಸ್ಫೂರ್ತಿ ಪಡೆದದ್ದೇ ಅನುಮಾನ ಉದ್ಭವಿಸಿದ್ದು ‘ಜರ್ನಿ ಆಫ್ ಎ ರಾಕ್‌ಸ್ಟಾರ್’ ಎಂಬ ಟ್ಯಾಗ್‌ಲೈನ್ ಕಾರಣಕ್ಕೆ. ಹಿಂದಿಯಲ್ಲಿ ಬಂದಿದ್ದ ‘ರಾಕ್‌ಸ್ಟಾರ್’ಗೂ ಇಲ್ಲಿನ ರಾಕ್‌ಸ್ಟಾರ್‌ಗೂ ಸಂಬಂಧವೇ ಇಲ್ಲ ಎಂದರು ನಿರ್ದೇಶಕರು.ರಾಘವ ಲೋಕಿ ಈಗ ರಾಘವ ಮರಸೂರ್ ಆಗಿದ್ದಾರೆ. ಜೊತೆಗೆ ‘ರಾಘವ ಸಿನಿಮಾ ಸಂಸ್ಥೆ’ಯನ್ನೂ ಪ್ರಾರಂಭಿಸಿದ್ದಾರೆ. ಅವರ ಹೊಸ ಸಂಸ್ಥೆಗೆ ಮತ್ತು ಚಿತ್ರದ ಟ್ರೇಲರ್‌ಗೆ ಚಾಲನೆ ನೀಡಿದ್ದು ಅವರ ಆಪ್ತ ಗೆಳೆಯ, ನಟ ದರ್ಶನ್.ಇಲ್ಲಿ ರಾಕ್‌ಸ್ಟಾರ್‌ನ ಗೆಟಪ್‌ನಲ್ಲಿರುವುದು ನಟ ಅಜಯ್‌ ರಾವ್. ಚಿತ್ರದಲ್ಲಿ ರಾಕ್‌ಸ್ಟಾರ್ ಕೃಷ್ಣ! ‘ಕೃಷ್ಣ’ನ ಪಾತ್ರಗಳಿಗೆ ಹೆಸರಾದ ಅಜಯ್ ತಮ್ಮ ನಾಮದೊಂದಿಗೇ ಕೃಷ್ಣ ಹೆಸರನ್ನಿಲ್ಲಿ ಅಂಟಿಸಿಕೊಂಡಿದ್ದಾರೆ. ಬಹಳ ಎನರ್ಜಿ ಬಯಸುವ ಅವರ ಪಾತ್ರಕ್ಕೆ ಗುರುಕಿರಣ್ ಸಂಗೀತವೇ ಸಾಕಷ್ಟು ಎನರ್ಜಿ ಒದಗಿಸಿದೆಯಂತೆ. ರಾಕ್‌ಸ್ಟಾರ್‌ಗೆ ಬೇಕಾದಂಥ ಮೇಲ್‌ಸ್ತರದ ದನಿಯ ಹಾಡುಗಳನ್ನು ಸಂಯೋಜಿಸುವ ಹೊಣೆ ಗುರುಕಿರಣ್ ಅವರದು. ನಿರ್ದೇಶಕರಿಗಿಂತಲೂ ಕಥೆಯ ಕುರಿತು ವಿವರಣೆ ನೀಡಿದ್ದು ಸಂಭಾಷಣೆಕಾರ ಆನಂದಪ್ರಿಯ. ಈಗಿನ ಪೀಳಿಗೆಯ ಜನತೆ ಪ್ರೀತಿ ಪ್ರೇಮ ಮತ್ತು ಬದುಕನ್ನು ನೋಡುತ್ತಿರುವ ಆಯಾಮದ ಚಿತ್ರಣ ಚಿತ್ರದಲ್ಲಿದೆಯಂತೆ. ರಾಕ್‌ಸ್ಟಾರ್‌ನ ಪಯಣ ಚಿತ್ರಿತವಾದರೂ ಪ್ರೇಮಗಾಥೆಗೆ ಹೆಚ್ಚಿನ ಆದ್ಯತೆ ಇದೆ ಎಂದರು ಅವರು.ನಾಯಕಿ ಅನಿಶಾಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ನಿರ್ಮಾಪಕ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.  z

ಪ್ರತಿಕ್ರಿಯಿಸಿ (+)