ಭಾನುವಾರ, ಫೆಬ್ರವರಿ 28, 2021
31 °C
ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಘೋಷಣೆ

ರಾಗಿ ಬ್ರ್ಯಾಂಡ್‌ ಜನಪ್ರಿಯಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಗಿ ಬ್ರ್ಯಾಂಡ್‌ ಜನಪ್ರಿಯಕ್ಕೆ ಕ್ರಮ

ಹೈದರಾಬಾದ್‌: ಕರ್ನಾಟಕದಲ್ಲಿ  ಬೆಳೆಯುತ್ತಿರುವ ರಾಗಿಯನ್ನು ಬ್ರ್ಯಾಂಡ್‌ ಆಗಿ ಜನಪ್ರಿಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೈದರಾಬಾದ್‌ನಲ್ಲಿರುವ ಅಂತರ ರಾಷ್ಟ್ರೀಯ ಅರೆ ಶುಷ್ಕ ವಲಯದ ಬೆಳೆ ಸಂಶೋಧನಾ ಸಂಸ್ಥೆಯ (ಐಸಿಆರ್‌ಐಎಸ್‌ಎಟಿ) ಮುಖ್ಯ ಕಚೇರಿಯಲ್ಲಿ ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಈ ಮಾಹಿತಿ ನೀಡಿದರು.‘ದೇಶದಲ್ಲಿ ಬೆಳೆಯುತ್ತಿರುವ ಒಟ್ಟು ರಾಗಿಯಲ್ಲಿ ಕರ್ನಾಟಕ ಶೇ 70ರಷ್ಟು ಪಾಲು ಹೊಂದಿದೆ. ಈ ಕಾರಣಕ್ಕೆ ರಾಜ್ಯದ ರೈತರ ವರಮಾನ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ರಾಗಿಯನ್ನು ಬ್ರ್ಯಾಂಡ್‌ ಆಗಿ ಜನಪ್ರಿಯಗೊಳಿಸುವ ಮೂಲಕ ಹೆಚ್ಚಿನ ಬೇಡಿಕೆ ಸೃಷ್ಟಿಸಲು ನಿರ್ಧರಿಸಲಾಗಿದೆ’ ಎಂದರು.ಶುಕ್ರವಾರ ಇಲ್ಲಿ ನಡೆದ ಕಾರ್ಯಾಗಾರದಲ್ಲಿ ಎಲ್ಲ ಭಾಗಿದಾರರೊಂದಿಗೆ  ಕರ್ನಾಟಕದ ರಾಗಿಯನ್ನು ಬ್ರ್ಯಾಂಡ್‌ ಆಗಿ ಜನಪ್ರಿಯಗೊಳಿಸುವ ಕುರಿತು ಚರ್ಚೆ ನಡೆಸಲಾಯಿತು. ಎಂಟಿಆರ್‌, 24 ಮಂತ್ರಾ, ಶ್ರೇಷ್ಠಾ, ಮನ್ನಾ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ  ಸಂಸ್ಕರಿಸಿದ ಆಹಾರ ತಯಾರಿಸುವ ಕಂಪೆನಿಗಳು ಹಾಗೂ ಬಿಗ್‌ ಬಾಸ್ಕೆಟ್‌ನಂತಹ ಆಹಾರ ಉತ್ಪನ್ನಗಳನ್ನು ವಿತರಣೆ ಮಾಡುವ ಕಂಪೆನಿಗಳು ಸಭೆಯಲ್ಲಿ ಭಾಗವಹಿಸಿದ್ದವು.‘ರೈತರಿಗೆ ಅನುಕೂಲವಾಗುವಂತೆ ಏಕದಳಧಾನ್ಯ ಮತ್ತು ರಾಗಿ, ನವಣೆಯಂತಹ ಆಹಾರ ಧಾನ್ಯಗಳಿಗೆ ಏಕರೂಪದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಗರ ವಾಸಿಗಳಲ್ಲಿ ರಾಗಿಯ ವಿಭಿನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸಲೂ ನಿರ್ಧರಿಸಲಾಗಿದೆ’ ಎಂದರು.‘ಭಾರತದ ಆಹಾರ ಧಾನ್ಯಗಳ ಮರು ಬ್ರ್ಯಾಂಡ್‌ ಮಾಡುವ ಅಗತ್ಯವಿದೆ’ ಎಂದು ಐಐಎಂಆರ್‌ನ ಬಿ.ದಯಾಕರ್‌ ರಾವ್ ಅವರು ಹೇಳಿದ್ದು, ‘ಆಹಾರಧಾನ್ಯಗಳ ಬಾಳಿಕೆ ಅವಧಿಯನ್ನು 10 ರಿಂದ 30 ದಿನಗಳಿಂದ  6 ತಿಂಗಳತನಕ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.ರಾಗಿಯನ್ನು ಬ್ರ್ಯಾಂಡ್‌ ಮಾಡುವುದರಿಂದ ₹100 ಕೋಟಿಗಳಷ್ಟು  ವಹಿವಾಟು ನಡೆಯಲಿದ್ದು, ಕನಿಷ್ಠ 300 ಕಂಪೆನಿಗಳು ರಾಗಿಯನ್ನು ಮಾರಾಟ ಮಾಡಲು ಮುಂದೆ ಬಂದಿವೆ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.