ಮಂಗಳವಾರ, ನವೆಂಬರ್ 19, 2019
28 °C

ರಾಘವೇಶ್ವರ ಭಾರತೀ ಸ್ವಾಮೀಜಿ ಪುರಪ್ರವೇಶ

Published:
Updated:

ಹೊಸನಗರ: ಸಮೀಪದ ರಾಮಚಂದ್ರಾಪುರ ಮಠದ ರಾಮೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾರ್ಗದರ್ಶನ ನೀಡಲಿರುವ ರಾಘವೇಶ್ವರ ಭಾರತೀ  ಸ್ವಾಮೀಜಿ ಅವರ ಪುರ ಪ್ರವೇಶ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ನಡೆಯಿತು.ಮಹಾನಂದಿ ಗೋಶಾಲಾ ಆವರಣದಿಂದ ಪೂರ್ಣ ಕುಂಭದ ಮೂಲಕ ಶ್ರಿಗಳಿಗೆ ಸ್ವಾಗತ ನೀಡಲಾಯಿತು. ಭಕ್ತರು ಭವ್ಯ ಮೆರವಣಿಗೆಯಲ್ಲಿ ಶ್ರಿಗಳನ್ನು ರಾಮ ದೇವರ ಸನ್ನಿಧಿಗೆ ಕರೆ ತಂದರು.ನಂತರ ಪ್ರವಚನ ಮಂಟಪದಲ್ಲಿ ಧೂಳಿ ಪಾದ ಪೂಜೆ ಫಲ ಸಮರ್ಪಣೆ ಕಾರ್ಯಕ್ರಮ ನಡೆಯಿತು. ವಿವಿಧ ಸಮಾಜದ ವತಿಯಿಂದ ಸುವಸ್ತು ಕಾಣಿಕೆ ಸಮರ್ಪಿಸಲಾಯಿತು.ಪುರ ಪ್ರವೇಶ ಕಾರ್ಯಕ್ರಮದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಭೀಮೇಶ್ವರ ಜೊಯ್ಸ, ಮಠದ ಆಡಳಿತಾಧಿಕಾರಿ ಕೆ.ಜಿ. ಭಟ್, ಹವ್ಯಕ ಮಹಾ ಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ, ಸಿಗಂದೂರು ಶೇಷಗಿರಿಭಟ್, ಮಂಡಲ ಅಧ್ಯಕ್ಷ ಜಟ್ಟಿಮನೆ ಗಣಪತಿಭಟ್, ರಾಮೋತ್ಸವ ಸಮಿತಿಯ ಅಧ್ಯಕ್ಷ ರಾಜಶೇಖರ ಹೆಬ್ಬಾರ್, ಸಂಪೆಕಟ್ಟೆ ಕುಮಾರ್, ಪ್ರಧಾನಮಠದ ವ್ಯವಸ್ಥಾಪಕ ರಾಮಚಂದ್ರಭಟ್ ಇದ್ದರು.

ಪ್ರತಿಕ್ರಿಯಿಸಿ (+)