ಮಂಗಳವಾರ, ಮೇ 11, 2021
20 °C

`ರಾಜಕಾರಣಿಗಳ ನೇಮಕ ಬೇಡ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸದಸ್ಯರನ್ನೇ ಈಗಲೂ ಮುಂದುವರೆಸಬೇಕು ಹಾಗೂ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜಕಾರಣಿಗಳನ್ನು ನೇಮಿಸಬಾರದು ಎಂದು ಮಂಡಳಿಯ ಮಾಜಿ ಕಾರ್ಯಕಾರಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಅವರು ಆಗ್ರಹಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯ  ಅಂಗಸಂಸ್ಥೆಗಳಾದ ಅಂತರ ರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ ಹಾಗೂ ವಿಶ್ವ ಕೃಷಿ ಅರಣ್ಯ ಕೇಂದ್ರಗಳು ಕರ್ನಾಟಕ ಜೈವಿಕ ಇಂಧನ ಕಾರ್ಯಕ್ರಮವನ್ನು ಜಾಗತಿಕ ಮಾದರಿ ಯೋಜನೆ ಎಂದು ಗುರುತಿಸಿವೆ. ಹೀಗಾಗಿ ಲ್ಯಾಟಿನ್ ಅಮೆರಿಕ, ಆಫ್ರಿಕ ಹಾಗೂ ಏಷ್ಯಾದ ದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಬರುವ ಆಗಸ್ಟ್‌ನಲ್ಲಿ ನಗರದಲ್ಲಿ ಜೈವಿಕ ಇಂಧನ ಕುರಿತ ಸಂಚಾಲನಾ ಸಮಿತಿಯ ಸಭೆಯನ್ನು ನಡೆಸಲು ಅಂತರರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ ಹಾಗೂ ವಿಶ್ವ ಕೃಷಿ ಅರಣ್ಯ ಕೇಂದ್ರಗಳು ನಿರ್ಧರಿಸಿವೆ ಎಂದು ತಿಳಿಸಿದರು.   ದಿವಾಕರ್‌ರಾವ್, ಉಡುಪಿ ಶ್ರೀನಿವಾಸ್, ದೇವರಾಜು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.