ಶನಿವಾರ, ಏಪ್ರಿಲ್ 17, 2021
30 °C

ರಾಜಕಾರಣಿಗಳ ಮುಖವಾಡ ಧರಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘ-ಹಸಿರು ಸೇನೆ ಕಾರ್ಯಕರ್ತರು ನಗರದ ಗಾಂಧಿವನದಲ್ಲಿ ಬುಧವಾರ ಜನಪ್ರತಿನಿಧಿಗಳ ಮುಖವಾಡ ಧರಿಸಿ ಧರಣಿ ನಡೆಸಿದರು.ಅಕ್ರಮ ಮರಳು ಗಣಿಗಾರಿಕೆಗೆ ಜನಪ್ರತಿನಿಧಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ನಿಲ್ಲಿಸುವಲ್ಲಿ ಕ್ರಮ ಕೈಗೊಂಡಿಲ್ಲ. ಶಾಶ್ವತ ನೀರಾವರಿಗೆ ಸಮರ್ಪಕವಾಗಿ ಆಗ್ರಹಿಸುತ್ತಿಲ್ಲ. ಭ್ರಷ್ಟಾಚಾರ ನಿಯಂತ್ರಣವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಚಿವ ವರ್ತೂರು ಪ್ರಕಾಶ್, ಶಾಸಕ ವೈ.ಸಂಪಂಗಿ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮುಖಂಡ ಬಿಸ್ಸೇಗೌಡ ಮತ್ತಿತರರ ಮುಖವಾಡ ಧರಿಸಿದ ಕಾರ್ಯಕರ್ತರು, `ಶಾಶ್ವತ ನೀರಾವರಿಗೆ ಬದಲು ಬಿಸ್ಲೆರಿ ನೀರು ಕೊಡಿ, ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಬಾರದು, ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆ ಮುಚ್ಚಬೇಕು~ ಎಂಬ ಫಲಕಗಳನ್ನು ವ್ಯಂಗ್ಯವಾಗಿ ಪ್ರದರ್ಶಿಸಿದರು. ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಒಂದಾಗಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಹೊಸ ಬಗೆಯ ಪ್ರತಿಭಟನೆ ಕಂಡ ನಾಗರಿಕರು ಗೊಂದಲಕ್ಕೆ ಒಳಗಾದರೂ, ನಂತರ ಧರಣಿಯ ವೈಖರಿ ಅರ್ಥವಾಗಿ ಮುಗುಳ್ನಕ್ಕರು.ಸೇನೆಯ ಜಿಲ್ಲಾ ಸಂಚಾಲಕರಾದ ಕೆ.ಶ್ರೀನಿವಾಸಗೌಡ, ಹೂಹಳ್ಳಿ ನಾಗರಾಜ್, ಹುಲ್ಕೂರು ಹರಿಕುಮಾರ್, ಬಿಸ್ನಹಳ್ಳಿ ಮುನಿರಾಜು, ನೀಲಕಂಠಪುರ ಮುನೇಗೌಡ, ಧನಮಟ್ನಹಳ್ಳಿ ಗೋಪಾಲ್, ಕೆಂಬೋಡಿ ಕೃಷ್ಣೇಗೌಡ, ಈಕಂಬಹಳ್ಳಿ ಮಂಜುನಾಥ, ಹರಿನಾಥ್, ಮುರಳಿಕೃಷ್ಣ, ವಿಶ್ವನಾಥ, ಮುನಿಕೃಷ್ಣ, ಕೂಟೇರಿ ನಾಗರಾಜ್, ಕೆ.ನಂದಿನಿ, ಭಾರ್ಗವಿ, ಕೂಟೇರಿ ಹರೀಶ್, ಗದ್ದೆಕಣ್ಣೂರು ಜಗದೀಶ್, ಮುರಳಿ ಕೃಷ್ಣ, ವಿಟ್ಟಪ್ಪನಹಳ್ಳಿ ವೆಂಕಟೇಶ್, ಭಾರ್ಗವಿ, ಹೇಮಲತ, ಈಕಂಬಳ್ಳಿ ಮಂಜುನಾಥ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.