ಬುಧವಾರ, ಅಕ್ಟೋಬರ್ 16, 2019
27 °C

ರಾಜಕಾರಣಿಯೊಬ್ಬರ ಆಣತಿ ಮೇರೆಗೆ ಭಂವರಿ ಹತ್ಯೆ:ಸಿಬಿಐ

Published:
Updated:

ಜೈಪುರ (ಐಎಎನ್‌ಎಸ್): ನಾಪತ್ತೆಯಾಗಿದ್ದ ನರ್ಸ್ ಭಂವರಿ ದೇವಿ ಅವರನ್ನು ರಾಜಕಾರಣಿಯೊಬ್ಬರ ಆಣತಿಯಂತೆ ಹತ್ಯೆ ಮಾಡಲಾಗಿತ್ತು ಎಂದು ಸಿಬಿಐ ರಾಜಸ್ತಾನ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.ಭಂವರಿ ದೇವಿಯ ಪತಿ ಅಮರ್‌ಚಾಂದ್ ಅವರು ಬಂಧನಕ್ಕೆ ಒಳಗಾಗುವುದಕ್ಕಿಂತಲೂ ಮೊದಲು, ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ  ನ್ಯಾಯಾಲಯಕ್ಕೆ ಸಿಬಿಐ ಈ ವಿಚಾರವನ್ನು ದೃಢಪಡಿಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

 

ಅರ್ಜಿಯನ್ನು ವಜಾ ಮಾಡಬೇಕೆಂದು ಸಿಬಿಐ ಕೋರಿತು. ಆದರೆ ಇದನ್ನು ನಿರಾಕರಿಸಿದ ನ್ಯಾಯಾಲಯ ಫೆ. 21ರಂದು ಅಂತಿಮ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿತು.

Post Comments (+)