ಶುಕ್ರವಾರ, ನವೆಂಬರ್ 15, 2019
21 °C

ರಾಜಕಾರಣ: ಯುವಕರಿಗೆ ಪ್ರಣವ್ ಕರೆ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರ ರಾಜಕಾರಣದಲ್ಲಿ ಯುವ ಜನತೆ ಮಹತ್ವದ ಪಾತ್ರ ವಹಿಸಬೇಕು ಎಂದು ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿ ಕರೆ ನೀಡಿದ್ದಾರೆ.ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರ ಸೇರಬೇಕು ಎಂದು ವಿದೇಶಾಂಗ ಸಚಿವ ಕೃಷ್ಣ ಅವರು ಹೇಳಿಕೆ ನೀಡಿದ ಬೆನ್ನಲ್ಲಿಯೇ ಪ್ರಣವ್ ಅವರು, ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಲು ಯುವ ಜನತೆಗೆ ಕರೆ ನೀಡಿರುವುದು ವಿಶೇಷ ಅರ್ಥವನ್ನು ಕಲ್ಪಿಸಿದೆ.ಸಕ್ರಿಯ ರಾಜಕೀಯದಿಂದ ನಿರ್ಗಮಿಸುತ್ತಿರುವುದರಿಂದ ಕೇಂದ್ರ ಸರ್ಕಾರದಲ್ಲಿ ಒಂದು ರೀತಿಯ ಶೂನ್ಯ ಸೃಷ್ಟಿಯಾಗಿದೆಯಲ್ಲ ಎಂದು ದೂರದರ್ಶನದ ಸಂದರ್ಶನದಲ್ಲಿ ಕೇಳಿದಾಗ `ಹಳಬರು ಯುವ ಜನಾಂಗಕ್ಕೆ ಸ್ಥಾನ ತೆರವು ಮಾಡಿಕೊಡಬೇಕು~ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)