ಶುಕ್ರವಾರ, ಮೇ 20, 2022
27 °C

ರಾಜಕಾಲುವೆ ಅವ್ಯವಸ್ಥೆ ಆಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಸಮೀಪದ ಕಸ್ತೂರಿ ನಗರ ಸಮೀಪದ ಎರಡನೇ ಹಂತದ ರಾಜಕಾಲುವೆಯ ಅವ್ಯವಸ್ಥೆಯ ಆಗರವಾಗಿದೆ. ಸಂಗ್ರಹವಾದ ಮಳೆಯ ನೀರಿನ ಜತೆಗೆ ಒಳ ಚರಂಡಿ ಮೂಲಕ ಹರಿದು ಬಂದ ಕಲುಷಿತ ನೀರು ಸಹ ಸರಾಗವಾಗಿ ಹರಿಯದೆ ಕ್ರಿಮಿಕೀಟಗಳಿಗೆ ಉಗಮ ಸ್ಥಾನವಾಗಿ ಬದಲಾಗಿದೆ. ರಾಜಕಾಲುವೆಯ ಮಗ್ಗುಲಿನಲ್ಲಿ ಅಭಿವೃದ್ಧಿ ಕಾಣದ ಉದ್ಯಾನ, ಅದಕ್ಕೆ ಹೊಂದಿಕೊಂಡಂತೆ ಕೆರೆಯ ನೀರು ಸಹ ಕಲುಷಿತಗೊಂಡಿದೆ.‘ಅವ್ಯವಸ್ಥೆ ಸರಿಪಡಿಸುವಂತೆ ಕೋರಿ ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿದ್ದೂ ಆಗಿದೆ, ಶಾಸಕರು ಹಾಗೂ ಈ ಭಾಗದ ವಾರ್ಡಿನ ಪಾಲಿಕೆ ಸದಸ್ಯರೂ ಆದ ಉಪಮೇಯರ್ ದಯಾನಂದ ಅವರು ಸಹ ಕಾಮಗಾರಿಗಳ ಚಾಲನೆ ನೀಡಿದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಐಟಿಐ ನಿವೃತ್ತ ಎಂಜಿನಿಯರ್ ರಾಮಮೂರ್ತಿ ಆರೋಪಿಸಿದರು.‘ಆ ಕಲುಷಿತ ನೀರಿನಲ್ಲಿ ತೇಲು ತ್ತಿರುವ ಪ್ಲಾಸ್ಟಿಕ್ ಚೀಲಗಳ ಜತೆಗೆ ಹಾವುಗಳು ಹರಿದಾಡುತ್ತಿದ್ದು, ಅಪಾಯದ ಭೀತಿ ಉಂಟಾಗಿದೆ’ ಎಂದು ಸ್ಥಳೀಯರು ದೂರಿದರು. ‘ಕಲುಷಿತ ನೀರಿನ ದುರ್ವಾಸನೆಯಿಂದ ನೈರ್ಮಲ್ಯ ಇಲ್ಲದೆ ಅನಾರೋಗ್ಯಕರ ವಾತಾವರಣದಲ್ಲಿ ಜೀವನ ಸವೆಸಬೇಕಾಗಿದೆ. ಉದ್ಯಾನದ ಆವರಣದಲ್ಲಿ ಸಂಜೆಯ ವೇಳೆ ಅನೈತಿಕ ಚಟುವಟಿಕೆಗಳೂ ನಡೆಯುತ್ತಿವೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.  ನೈರ್ಮಲ್ಯ ಕಾಪಾಡಿ ನಿವಾಸಿಗಳ ಹಿತ ರಕ್ಷಣೆಗೆ ಬಿಬಿಎಂಪಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.