ಶುಕ್ರವಾರ, ಮೇ 7, 2021
19 °C

ರಾಜಕೀಯದಲ್ಲಿ ಪ್ರವಾಹದ ವಿರುದ್ಧ ಈಜುವ ಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಎರಡು ರಾಜಕಾರಣದಲ್ಲಿ ಪ್ರವಾಹದ ವಿರುದ್ಧ ಈಜಬೇಕಾದ ಸಂಕ್ರಮಣದ ಸ್ಥಿತಿಯಲ್ಲಿ ನಾವು ಇದ್ದೇವೆ ಎಂದು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ಜೀ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದೆ. ಇಲ್ಲಿ ಸರ್ವಾಧಿಕಾರಿ ಧೋರಣೆಗೆ ಅವಕಾಶವಿಲ್ಲ. ಅಧಿಕಾರ ಮತ್ತು ಸಿದ್ಧಾಂತದ ಮಧ್ಯೆ ಯಾವುದು ದೊಡ್ಡದು ಎಂಬ ಪ್ರಶ್ನೆ ಬಂದಾಗ ಕೈಯಲ್ಲಿರುವ ಅಧಿಕಾರ ಬಿಟ್ಟು ಹೊರಗೆ ಬಂದಿದ್ದೇವೆ.  ಜನತಾ ಪಕ್ಷ ತೊರೆದು ಪ್ರತ್ಯೇಕ ಬಿಜೆಪಿ ಕಟ್ಟುವಾಗಲೂ ಕೂಡ ಇದೇ ಮಾರ್ಗ ಅನುಸರಿಸಲಾಯಿತು ಎಂದರು.ಸನ್ಮಾನ ಸ್ವೀಕರಿಸಿದ ಬಿಜೆಪಿ ಹಿರಿಯ ಮುಖಂಡ ಡಿ.ಎಂ. ರಂಗನಾಥ, ಜನಸಂಘದಲ್ಲಿರುವಾಗ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಬಿಜೆಪಿ ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷ ಅಲ್ಲ. ತತ್ವ-ಸಿದ್ಧಾಂತದ ಪಕ್ಷ ಎಂಬ ಕಾರಣಕ್ಕಾಗಿಯೇ ವಿಶೇಷ ರಾಜಕೀಯ ಪಕ್ಷ ಎನಿಸಿಕೊಂಡಿತ್ತು. ಆದರೆ, ಇಂದು ಬಿಜೆಪಿ ಹಲವು ತಿರುವುಗಳ ಮಧ್ಯೆ ಇದೆ. ನಮ್ಮ ತತ್ವ-ಸಿದ್ಧಾಂತಗಳಿಗೆ ಮೋಡ ಕವಿದಿದೆ, ದೂಳು ಮೆತ್ತಿದೆ. ಇದನ್ನು ಸರಿಸುವ ಮತ್ತು ಒರೆಸುವ ಕೆಲಸ ಆಗಬೇಕಿದೆ ಎಂದರು.ಸಮಾರಂಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ನಗರಸಭಾ ಅಧ್ಯಕ್ಷ ಎಸ್. ಎನ್. ಚನ್ನಬಸಪ್ಪ, `ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.