ಸೋಮವಾರ, ಜೂನ್ 14, 2021
26 °C

ರಾಜಕೀಯದಲ್ಲಿ ಮಹಿಳೆಯ ದಾಪುಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: `ಕುಟುಂಬ ರಕ್ಷಣೆ ಮತ್ತು ಗೌರವ ದೊರಕಿಸಿಕೊಡುವಲ್ಲಿ ಹೆಣ್ಣು ಮಹತ್ವದ ಪಾತ್ರ ನಿರ್ವಹಿಸುತ್ತಾಳೆ~ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರಾಜು ಗುರುವಾರ ಅಭಿಪ್ರಾಯಪಟ್ಟರು.ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಬಾಲಭವನದಲ್ಲಿ ಆಯೋಜಿ ಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ರಾಜಕೀಯ ಮೀಸಲಾತಿ ಮಹತ್ವದ ಕೊಡುಗೆ ನೀಡಿತು ಎಂದು ತಿಳಿಸಿದರು.ಮಹಿಳೆಯರು ಅಧ್ಯಕ್ಷರಾಗಿರುವ ಗ್ರಾಮ ಪಂಚಾಯಿತಿಗಳು ಪುರುಷರು ಅಧ್ಯಕ್ಷರಾಗಿರುವ ಗ್ರಾ.ಪಂ.ಗಿಂತ ಹೆಚ್ಚು ಉತ್ತಮವಾಗಿ ಕೆಲಸ ಮಾಡುತ್ತಿವೆ. ಸ್ತ್ರೀಶಕ್ತಿ ಆಂದೋಲನ ಮಹಿಳೆಯರ ಕರ್ತೃತ್ವ ಶಕ್ತಿಗೆ ಹೊಸ ಬಲ ನೀಡಿದೆ ಎಂದು ಹೇಳಿದರು.ಜಿಲ್ಲೆಯಲ್ಲಿರುವ 16 ಸಾವಿರ ಸ್ತ್ರೀ ಶಕ್ತಿ ಸಂಘಗಳು ವಿವಿಧ ಬ್ಯಾಂಕ್‌ಗಳಲ್ಲಿ ರೂ. 100 ಕೋಟಿಯಷ್ಟು ಉಳಿತಾಯ ಮಾಡಿವೆ. ದುಡಿಯುವ, ಉಳಿಸುವ ಶಕ್ತಿಯಿಂದ ಮಹಿಳೆಯರು ಮುಂದೊಂದು ದಿನ ಈ ದೇಶದ ಅರ್ಥ ವ್ಯವಸ್ಥೆಯನ್ನೇ ತಮ್ಮ ಹತೋಟಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ದಾಪುಗಾಲು ಇಡುತ್ತಿ ದ್ದರೂ ನೈರ್ಮಲ್ಯದಲ್ಲಿ ಇಂದಿಗೂ ನಮ್ಮ ಗ್ರಾಮಗಳು ಸೀಮಿತ ಚೌಕಟ್ಟು ಮೀರಲು ಸಾಧ್ಯವಾಗದೆ ಹೆಣಗಾಡು ತ್ತಿವೆ. ಜಿಲ್ಲೆಯಲ್ಲಿರುವ ಒಟ್ಟು 5 ಲಕ್ಷ ಕುಟುಂಬಗಳ ಪೈಕಿ ಕೇವಲ 2 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿವೆ. ಶೌಚಾಲಯ, ಶುದ್ಧ ಕುಡಿಯುವ ನೀರಿನ ಕೊರತೆ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟು ಮಾಡುತ್ತಿದೆ ಎಂದು ವಿಷಾದಿಸಿದರು.ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಸ್ತ್ರೀಶಕ್ತಿ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಕೆಲವು ಮಹಿಳೆಯರು ಮನೆ, ಗಂಡ, ಮಕ್ಕಳನ್ನು ನಿರ್ಲಕ್ಷಿಸುತ್ತಿ ರುವುದು ಗಮನಕ್ಕೆ ಬಂದಿದೆ. ಮಹಿಳೆ ತನ್ನ ಕೌಟುಂಬಿಕ ಬಾಧ್ಯತೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ಸಮಾಜ ಅಧಃಪತನಗೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದು.ಹೆ.ಗೌರಮ್ಮ (ಶಿಕ್ಷಣ), ಖುರ್ಷಿದಾ (ಸ್ವ ಸಹಾಯ ಸಂಘ), ಪೂಜನಾ (ಫುಟ್‌ಬಾಲ್), ಡಾ.ರಜನಿ (ಆರೋಗ್ಯ) ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಜಿಲ್ಲಾದಿಕಾರಿ ಆರ್.ಕೆ.ರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆನಂದರವಿ, ಸಮಾಜ ಸೇವಕಿ ರೇಣುಕಾ ಪರಮೇಶ್, ಶೈಲಾ ನಾಗರಾಜ್, ನಗರಸಭೆ ಸದಸ್ಯೆ ಸುಜಾತಾ ಚಂದ್ರಶೇಖರ್ ಮುಂತಾದ ವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.