ರಾಜಕೀಯದಲ್ಲಿ ಯುವಕರ ಸಂಖ್ಯೆ ಇಳಿಮುಖ

7

ರಾಜಕೀಯದಲ್ಲಿ ಯುವಕರ ಸಂಖ್ಯೆ ಇಳಿಮುಖ

Published:
Updated:
ರಾಜಕೀಯದಲ್ಲಿ ಯುವಕರ ಸಂಖ್ಯೆ ಇಳಿಮುಖ

ಬೆಂಗಳೂರು: `ಯುವಸಮೂಹಕ್ಕೆ ನಿರ್ದಿಷ್ಟ ಗುರಿ ಮತ್ತು ಧ್ಯೇಯಗಳು ಇಲ್ಲದೇ ಇರುವುದರಿಂದ ರಾಜಕೀಯ ವಲಯದಲ್ಲಿ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ~ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅಭಿಪ್ರಾಯಪಟ್ಟರು.ಸಂವಾದ ಸಂಸ್ಥೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಯುವ ನಡೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ರಾಜಕೀಯ ಕ್ಷೇತ್ರವಲ್ಲದೇ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರಗಳಲ್ಲೂ ಮುಂದುವರಿಯಬೇಕಾದರೆ ಯುವ ಸಮೂಹ ಇಚ್ಚಾಶಕ್ತಿಯನ್ನು ತೋರ್ಪಡಿಸಬೇಕು. ಪ್ರಸ್ತುತ ದಿನಗಳಲ್ಲಿ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಅಧ್ಯಾಪಕರ ಕೊರತೆಯಿದೆ~ ಎಂದರು.`ನನ್ನ ಪೋಷಕರು ಗ್ರಾಮೀಣ ಭಾಗದವರಾಗಿದ್ದರಿಂದ ಯಾವ ರೀತಿಯ ಶಿಕ್ಷಣ ನೀಡಬೇಕು ಎಂಬ ತಿಳುವಳಿಕೆ ಇರಲಿಲ್ಲ. ಇಂತಹ ಸ್ಥಿತಿಯಲ್ಲೂ ಅಧ್ಯಾಪಕರ ಸಹಕಾರದಿಂದಲೇ ಎಂ.ಎ ಓದಿ, ರಾಜಕೀಯ ಪ್ರವೇಶಿಸಿದೆ. ಸೂಕ್ತ ಮಾರ್ಗದರ್ಶನ ಮತ್ತು ಆತ್ಮಬಲ ಮಾತ್ರ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ~ ಎಂದರು.ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, `ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಯುವಕರಿದ್ದಾರೆ. ಯಾವುದೇ ಅನ್ಯಾಯವನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಮನೋಭಾವವನ್ನು ಯುವಕರು ಕಲಿಯಬೇಕು. ಸರ್ಕಾರಿ ಶಾಲೆಯಲ್ಲಿ ಕಲಿತರವರೆಲ್ಲ ನಕ್ಸಲ್‌ರಾಗುತ್ತಾರೆ ಎಂದು ಮೇಧಾವಿಯೊಬ್ಬರು ಹೇಳಿದ್ದಾರೆ. ಕಲಿಯುವ ಶಾಲೆ ಯಾವುದೆಂಬುದು ಮುಖ್ಯವಲ್ಲ, ಜ್ಞಾನ ಮುಖ್ಯ~ ಎಂದು ಹೇಳಿದರು.`ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದ ಮಲೆಕುಡಿಯ ಜನಾಂಗದ ವಿಠಲನನ್ನು ನಕ್ಸಲ್ ಬೆಂಬಲಿತ ಎಂದು ಜೈಲಿಗೆ ಕಳುಹಿಸುತ್ತಾರೆ ಎಂದಾದರೆ ದೇಶ ಯಾವ ಸ್ಥಿತಿಯನ್ನು ತಲುಪಿದೆ ಎಂಬುದನ್ನು ಅವಲೋಕಿಸಬೇಕು. ಯುವ ಸಮೂಹ ಕೀಳರಿಮೆಯನ್ನು ಬಿಟ್ಟು ದೇಶ  ಕಟ್ಟುವ ಕೆಲಸದಲ್ಲಿ ನಿರತರಾಗಬೇಕು~ ಎಂದು ಕರೆ ನೀಡಿದರು.                            

                             

ನಟ ವಿಜಯ ರಾಘವೇಂದ್ರ, ಪ್ರಜಾವಾಣಿಯ ಮುಖ್ಯ ಉಪಸಂಪಾದಕ ಎನ್.ಎ.ಎಂ.ಇಸ್ಮಾಯಿಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry