ಭಾನುವಾರ, ಆಗಸ್ಟ್ 9, 2020
21 °C

ರಾಜಕೀಯದಲ್ಲಿ ವಿಶ್ವಾಸದ ಕೊರತೆ: ಬಂಗೇರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯದಲ್ಲಿ ವಿಶ್ವಾಸದ ಕೊರತೆ: ಬಂಗೇರ

ಮೂಲ್ಕಿ: `ಜನಸೇವಕರೆಂದು ಸಮಾಜದಲ್ಲಿ ಕರೆದುಕೊಂಡರೂ, ರಾಜಕೀಯ ಕ್ಷೇತ್ರದಲ್ಲಿ ಇಂದು ಭ್ರಷ್ಟಾಚಾರ ಹೆಚ್ಚಿದ್ದರಿಂದ ಜನರ ವಿಶ್ವಾಸವನ್ನು ರಾಜಕಾರಣಿಗಳು ಕಳೆದುಕೊಳ್ಳುತ್ತಿದ್ದಾರೆ. ರಾಜಕಾರಣ ಸುಳ್ಳರ, ಕಳ್ಳರ ಸಂತೆ ಆಗುತ್ತಿರುವುದರಿಂದ ತಾನು ಮುಂದಿನ ರಾಜಕೀಯ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ~ ಎಂದು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಹೇಳಿದರು.ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಅಚ್ಯುತ ಕುಡ್ವಾ ಅಧ್ಯಕ್ಷತೆ ವಹಿಸಿದ್ದರು.ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಆರ್.ಶಂಕರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಮೀದಾ ಬೇಗಂ, ಪ್ರೋ. ನಾರಾಯಣ, ವಿದ್ಯಾರ್ಥಿ ಸಂಘದ ಹರಿಕೃಪಾ ಭಂಡಾರಿ, ಉಮೀರ ಬಾನು, ಅಮಿತ್ ಪೈ, ಜ್ಯೋತಿ ಪ್ರಭು, ಶೋಧನ್ ಶೆಟ್ಟಿ, ರವೀಂದ್ರ ನಾಯಕ್, ದುರ್ಗಾಗಣೇಶ್, ಸುನೀಲ್ ಕಾಮತ್, ಸ್ವಾತಿ, ನಿಶಿತ್ ಕೋಟ್ಯಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.