ರಾಜಕೀಯ ಕೈವಾಡದ ಶಂಕೆ:ದಿನೇಶ್ ಗುಂಡೂರಾವ್

7

ರಾಜಕೀಯ ಕೈವಾಡದ ಶಂಕೆ:ದಿನೇಶ್ ಗುಂಡೂರಾವ್

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾಂಗ್ರೆಸ್ ಸದಸ್ಯ ಎಸ್. ನಟರಾಜ್ ಅವರ ಹತ್ಯೆಯ ಹಿಂದೆ `ರಾಜಕೀಯ ಕೈವಾಡ ಇದೆ~ ಎಂದು ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದರು.ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ನಟರಾಜ್ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಮುರುಗನ್ ಮತ್ತು ಸಹಚರರನ್ನು ಬಂಧಿಸಲಾಗಿದೆ. ಆದರೆ ಮುರುಗನ್ ಒಬ್ಬರಿಂದಲೇ ಈ ಹತ್ಯೆ ಸಂಭವಿಸಿಲ್ಲ. ಇದರ ಹಿಂದೆ ರಾಜಕೀಯ ಕೈವಾಡ ಇದೆ~ ಎಂದು ಹೇಳಿದರು.ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಾಗುತ್ತಿರುವ ಕುರಿತು ಹಲವರಲ್ಲಿ ಅಸೂಯೆ ಇದೆ. ಮುರುಗನ್ ಬಂಧನದಿಂದ ಎಲ್ಲವೂ ಮುಗಿದಿಲ್ಲ. 25 ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲೆ ಮಾಡಿಸುವಂಥ ಆರ್ಥಿಕ ಸಾಮರ್ಥ್ಯ ಮುರುಗನ್‌ಗೆ ಇಲ್ಲ ಎಂದರು.ಈ ಹತ್ಯೆ ಹಿಂದೆ ಬಿಜೆಪಿ ಅಥವಾ ಜೆಡಿಎಸ್ ಕೈವಾಡ ಇಲ್ಲ. ಬಿಬಿಎಂಪಿಯ ಮಾಜಿ ಸದಸ್ಯ ಗೋವಿಂದರಾಜು ಅವರ ಹತ್ಯೆ ಯತ್ನದ ಹಿಂದಿರುವ ಶಕ್ತಿಗಳೇ ನಟರಾಜ್ ಹತ್ಯೆಯ ಹಿಂದಿವೆ. ಈ ಕುರಿತು ಸೂಕ್ತ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.ಈ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಗೃಹ ಸಚಿವ ಆರ್. ಅಶೋಕ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry