ಗುರುವಾರ , ಜೂನ್ 17, 2021
21 °C

ರಾಜಕೀಯ ಚಟುವಟಿಕೆಗಳ ಮಾಹಿತಿ ವೆಬ್‌ಸೈಟ್‌ನಲ್ಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ರಾಜಕೀಯ ಪಕ್ಷಗಳ ಸಮಗ್ರ ಚಟುವಟಿಕೆಗಳನ್ನು ಅಂತರ ಜಾಲದಲ್ಲಿ ನೀಡುವ ಮೂಲಕ ಜಿಲ್ಲಾಡಳಿತ ಸಾರ್ವಜನಿಕರಿಗೆ ಮಾಹಿತಿ ಒದಗಿಸುತ್ತಿದೆ.ಇದಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್‌ವೊಂದನ್ನು ತೆರೆಯ ಲಾಗಿದ್ದು, ಅದರ ವಿಳಾಸ www. shimoga.nic.in/ shimogaelection ಆಗಿದೆ. ಈ ಜಾಲತಾಣ ಪ್ರವೇಶಿಸಿದರೆ ರಾಜಕೀಯ ಪಕ್ಷಗಳ ಸಮಗ್ರ ವಿವರ ಲಭ್ಯವಾಗುವುದರ ಜೊತೆಗೆ ಚುನಾವಣಾ ನೀತಿ - ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ವಿವರ, ಮುಕ್ತ- ನ್ಯಾಯ ಸಮ್ಮತ ಚುನಾವಣೆ ನಡೆಸಲು ಕೈಗೊಳ್ಳಲಾಗಿರುವ ಮಾಹಿತಿ, ಚುನಾವಣಾ ಆಯೋಗದ ವೆಬ್‌ಸೈಟ್‌ ಲಿಂಕ್ ವಿವರಗಳು ಲಭ್ಯವಾಗಲಿವೆ.ರಾಜಕೀಯ ಪಕ್ಷಗಳು ಜಿಲ್ಲೆಯ ವಿವಿಧೆಡೆ ಆಯೋಜಿಸಿರುವ ಸಭೆ, ಸಮಾರಂಭ, ರೋಡ್ ಷೋ, ಪಾದಯಾತ್ರೆ, ಸ್ಥಳ, ಸಮಯ ಸೇರಿದಂತೆ ಆ ಪಕ್ಷಗಳ ಚಟುವಟಿಕೆಗಳ ಸಮಗ್ರ ಚಿತ್ರಣ ಲಭ್ಯವಾಗಲಿದೆ.ಈ ವೆಬ್‌ಸೈಟ್‌ನಲ್ಲಿ ಚುನಾವಣಾ ಸಂಬಂಧಿತ ದೂರುಗಳ ವಿವರಗಳನ್ನು ಕೂಡ ಪ್ರಕಟಿಸಲಾಗುತ್ತದೆ. ಇಲ್ಲಿಯವರೆಗೂ ಒಟ್ಟಾರೆ  17 ದೂರುಗಳ ಬಂದಿದ್ದು, 14 ದೂರುಗಳು ಇತ್ಯರ್ಥ ಪಡಿಸಲಾಗಿದ್ದು, 3 ದೂರುಗಳ ವಿಲೇವಾರಿ ಬಾಕಿ ಇದೆ. ದೂರುಗಳ ವಿವರಗಳು ಈ ವೆಬ್‌ಸೈಟ್‌ನಲ್ಲಿ ಸಿಗಲಿವೆ.ಇಲ್ಲಿಯವರೆಗೂ ಜಿಲ್ಲೆಯಲ್ಲಿ ನೀತಿ- ಸಂಹಿತೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿ ಕಾರಿಗಳಾದ ಆದ ವಿಪುಲ್ ಬನ್ಸಲ್‌ ಮಾಹಿತಿ ನೀಡಿದ್ದಾರೆ.ವೆಬ್ ಕಾಸ್ಟಿಂಗ್

ಜಿಲ್ಲೆಯ ಆಯ್ದ ಬೂತ್‌ಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ್ದ ವೆಬ್ ಕಾಸ್ಟಿಂಗ್ ಪ್ರಯೋಗ ವನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.ವೆಬ್ ಕಾಸ್ಟಿಂಗ್ ವ್ಯವಸ್ಥೆಯಲ್ಲಿ ಆಯ್ದ ಬೂತ್‌ಗಳಲ್ಲಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತದೆ. ಕ್ಯಾಮೆರಾ ಅಳವಡಿಕೆ ಮಾಡಿದ ಬೂತ್‌ಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯ ನೇರ ದೃಶ್ಯಾವಳಿ ಗಳನ್ನು ಅಂತರ್ ಜಾಲದ ಮೂಲಕ ನೇರವಾಗಿ ನೋಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.