ರಾಜಕೀಯ ಪಕ್ಷಗಳಿಂದ ಸ್ವಾಗತ...

7

ರಾಜಕೀಯ ಪಕ್ಷಗಳಿಂದ ಸ್ವಾಗತ...

Published:
Updated:
ರಾಜಕೀಯ ಪಕ್ಷಗಳಿಂದ ಸ್ವಾಗತ...

ನವದೆಹಲಿ (ಪಿಟಿಐ/ಐಎಎನ್‌ಎಸ್): ಅಫ್ಜಲ್ ಗುರುಗೆ ನೇಣು ಕಂಬಕ್ಕೆ ಏರಿಸಿರುವ ಕೇಂದ್ರದ ಕ್ರಮವನ್ನು ಪಿಡಿಪಿ ಹೊರತುಪಡಿಸಿ ದೇಶದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಸ್ವಾಗತಿಸಿವೆ.ಸಂಸತ್ ಮೇಲಿನ ದಾಳಿಕೋರನಿಗೆ ಗಲ್ಲಿಗೇರಿಸುವ ಮೂಲಕ ನ್ಯಾಯ ಒದಗಿಸಿದಂತಾಗಿದೆ ಎಂದು ಇತರೆಲ್ಲ ಪಕ್ಷಗಳು ಹೇಳಿದರೆ, ಬಿಜೆಪಿ ಮಾತ್ರ ನೇಣಿಗೇರಿಸಲು ವಿಳಂಬ ಮಾಡಿರುವುದನ್ನು ಪ್ರಶ್ನಿಸಿದೆ.ಭಯೋತ್ಪಾದಕತೆಯನ್ನು ಭಾರತ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಈ ಮೂಲಕ ನೀಡಿದಂತಾಗಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಹೇಳಿವೆ.ವಿವಿಧ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಕೆಳಗಿನಂತಿವೆ:

ಕಾನೂನಿನನ್ವಯ ಕ್ರಮ ತೆಗೆದುಕೊಳ್ಳಲಾಗಿದೆ - ರಷೀದ್ ಅಲ್ವಿ, ಕಾಂಗ್ರೆಸ್ ವಕ್ತಾರ.ಹೀನ ಕೃತ್ಯವೆಸಗಿದ ವ್ಯಕ್ತಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅಫ್ಜಲ್‌ಗೆ ನೇಣಿಗೆ ಏರಿಸಬೇಕೆಂದು ಇಡೀ ದೇಶವೇ ಒತ್ತಾಯಿಸಿತ್ತು. ಆದರೆ, ದೀರ್ಘ ಅವಧಿ ನಂತರ ಕ್ರಮ ತೆಗೆದುಕೊಳ್ಳಲಾಗಿದೆ. ವಿಳಂಬಕ್ಕೆ ಕಾರಣವೇನು ಎನ್ನುವ ಬಗ್ಗೆ ದೇಶಕ್ಕೆ ಉತ್ತರ ನೀಡಬೇಕು -

ರವಿಶಂಕರ ಪ್ರಸಾದ, ಬಿಜೆಪಿ ವಕ್ತಾರ .

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ ಕೂಡಲೇ ಕಾನೂನು ಪ್ರಕಾರ ಅಫ್ಜಲ್‌ಗೆ ಗಲ್ಲಿಗೇರಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಲೆಕ್ಕಾಚಾರವಿಲ್ಲ -ಮನೀಷ್ ತಿವಾರಿ, ವಾರ್ತಾ ಮತ್ತು ಪ್ರಸಾರ ಸಚಿವ.

ಈ ನೆಲದ ಕಾನೂನಿನ ನಿಯಮಾನುಸಾರ ಕ್ರಮ ಜರುಗಿಸಲಾಗಿದೆ - ಸೀತಾರಾಮ್ ಯೆಚ್ಯೂರಿ, ಸಿಪಿಐಎಂ ಪಾಲಿಟ್‌ಬ್ಯೂರೊ ಸದಸ್ಯ.ಕೇಂದ್ರದ ಕ್ರಮ ನಿರಾಸೆ ತಂದಿದೆ. ಅಫ್ಜಲ್ ಕ್ಷಮಾದಾನದ ಅರ್ಜಿ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ರಾಜಕೀಯ ಸೂಕ್ಷ್ಮತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಿತ್ತು -ನಯೀಮ್ ಅಕ್ತರ್, ಪೀಪಲ್ ಡೆಮೊಕ್ರಟಿಕ್ ಪಾರ್ಟಿ (ಪಿಡಿಪಿ) ವಕ್ತಾರ.ವಿಳಂಬವಾದರೂ ನ್ಯಾಯ ಸಂದಿದೆ -ನಿತೀಶ್ ಕುಮಾರ, ಬಿಹಾರ ಮುಖ್ಯಮಂತ್ರಿ.ಸಾಕಷ್ಟು ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕಿತ್ತು - ಮನಮೋಹನ್ ವೈದ್ಯ, ಆರ್‌ಎಸ್‌ಎಸ್ ಮುಖಂಡ.ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಯತ್ನಿಸುತ್ತಿರುವ ಕೋಮುವಾದಿ ಶಕ್ತಿಗಳನ್ನು ಒಲೈಸಲು ಈ ಕ್ರಮ ಜರುಗಿಸಲಾಗಿದೆ - ದೀಪಾಂಕರ್ ಭಟ್ಟಾಚಾರ್ಯ, ಸಿಪಿಐಎಂಎಲ್ ಪ್ರಧಾನ ಕಾರ್ಯದರ್ಶಿ.ಗಲ್ಲಿಗೇರಿಸಲು ವಿಳಂಬ ಮಾಡಿರುವ ವಿಷಯವನ್ನೇ ದೊಡ್ಡದು ಮಾಡುವುದು ಸರಿಯಲ್ಲ - ದಿಗ್ವಿಜಯ್ ಸಿಂಗ್ಇದು ಉತ್ತಮ ನಿರ್ಧಾರ. ಆದರೆ, ಇದು ಸಾಕಷ್ಟು ಹಿಂದೆಯೇ ಮಾಡಬೇಕಿತ್ತು. ಈ ಕ್ರಮದಿಂದ ಭಯೋತ್ಪಾದನೆ ವಿರುದ್ಧ ಭಾರತ ಕಠಿಣ ನಿಲುವು ತಾಳಿದೆ ಎನ್ನುವುದು ಇಡೀ ಜಗತ್ತಿಗೆ ಗೊತ್ತಾಗಿದೆ - ಜೈನುಲ್ ಅಬೆದಿನ್ ಅಲಿ ಖಾನ್, ಅಜ್ಮೇರ್‌ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ದಿವಾನ್.ಗಲ್ಲು ಶಿಕ್ಷೆ ವಿರೋಧಿಸುವವರ ಪೈಕಿ ನಾನು        ಕೂಡ ಒಬ್ಬ -ರಾಜೀಂದರ್ ಸಾಚಾರ್, ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ.ಕಾನೂನು ಪಾಲನೆ ವಿಷಯದಲ್ಲಿ ಈ ದಿನ ಮಹತ್ವದ್ದು -ಅಮಿತಾಬ್ ಬಚ್ಚನ್, ಬಾಲಿವುಡ್ ನಟಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಉಗ್ರ ಸಂಘಟನೆಗಳಿಗೆ ಕಠಿಣ ಸಂದೇಶ ರವಾನೆ - ದೇವವೃತ ಬಿಸ್ವಾಸ್, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ.ಆಫ್ಜಲ್ ಗುರುವನ್ನು ನೇಣಿಗೇರಿಸಲು ವಿಳಂಬವಾಗಿಲ್ಲ- ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಳ್ಳಿ ರಾಮಚಂದ್ರನ್,

ಸಂಭ್ರಮಾಚರಣೆ

ನವದೆಹಲಿ (ಪಿಟಿಐ):
ಅಫ್ಜಲ್‌ಗೆ ನೇಣು ಕಂಬಕ್ಕೆ ಏರಿಸಿದ ವಿಷಯ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಕಾರ್ಯಕರ್ತರು ನವದೆಹಲಿಯ ಜಂತರ್ ಮಂತರ್ ಎದುರು ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

`ಕುಟುಂಬಕ್ಕೆ ಅಫ್ಜಲ್ ದೇಹ ನೀಡಿ'

ನವದೆಹಲಿ (ಪಿಟಿಐ):
ಅಫ್ಜಲ್‌ಗೆ ನೇಣು ಕಂಬಕ್ಕೆ ಏರಿಸಿದ ವಿಷಯ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಕಾರ್ಯಕರ್ತರು ನವದೆಹಲಿಯ ಜಂತರ್ ಮಂತರ್ ಎದುರು ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಶ್ರೀನಗರ (ಪಿಟಿಐ): ಮಾನವೀಯ ನೆಲೆಗಟ್ಟಿನಲ್ಲಿ ಅಫ್ಜಲ್ ಮೃತದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಒತ್ತಾಯಿಸಿದ್ದಾರೆ.ಖಂಡನೆ

ಜೈಪುರ (ಪಿಟಿಐ):
ಅಫ್ಜಲ್ ಗುರುಗೆ ಗಲ್ಲಿಗೇರಿಸಿದ್ದನ್ನು ತೀವ್ರವಾಗಿ ಖಂಡಿಸಿರುವ ನಾಗರಿಕ ಹಕ್ಕುಗಳ ಸಂಘಟನೆ ಪ್ರಧಾನ ಕಾರ್ಯದರ್ಶಿ ಕವಿತಾ ಶ್ರೀವಾಸ್ತವ್, ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂದಿದ್ದಾರೆ. ಸರ್ಕಾರ ಗಲ್ಲು ಶಿಕ್ಷೆ ರದ್ದುಪಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಗುಂಡಿನಿಂದ ಗಲ್ಲಿನವರೆಗೆ

4ಡಿ. 13, 2001: ಸಂಸತ್ ಭವನದೊಳಗೆ ನುಗ್ಗಿದ ಐವರು ಉಗ್ರರಿಂದ ಗುಂಡಿನ ದಾಳಿ. ಭದ್ರತಾ ಸಿಬ್ಬಂದಿ ಸೇರಿ 9 ಮಂದಿ ಸಾವು, 15 ಕ್ಕೂ ಹೆಚ್ಚು ಮಂದಿಗೆ ಗಾಯ. ಆಗ ಸಂಸತ್ ಅಧಿವೇಶನ ನಡೆಯುತ್ತಿತ್ತು.

4ಡಿ. 15, 2001:  ಉಗ್ರರಿಗೆ ನೆರವು ನೀಡಿದ್ದ ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಸದಸ್ಯ ಅಫ್ಜಲ್ ಗುರುವನ್ನು ಸೆರೆ ಹಿಡಿದ ಕಾಶ್ಮೀರ ಪೊಲೀಸರು. ದೆಹಲಿಯಲ್ಲಿ ಝಾಕೀರ್ ಹುಸೇನ್ ಕಾಲೇಜಿನ ಎಸ್.ಎ.ಆರ್ ಗಿಲಾನಿ, ಅಫ್ಸಾನ್ ಗುರು ಹಾಗೂ ಆಕೆಯ ಪತಿ ಶೌಕತ್ ಹುಸೇನ್ ಗುರು ಬಂಧನ.

4ಡಿ. 29, 2001: ಅಫ್ಜಲ್ 10 ದಿನ ಪೊಲೀಸ್ ವಶಕ್ಕೆ.

4ಜೂನ್ 4, 2002: ಅಫ್ಜಲ್ ಗುರು, ಗಿಲಾನಿ, ಶೌಕತ್ ಹುಸೇನ್ ಗುರು ಹಾಗೂ ಅಫ್ಸಾನ್ ಗುರು ವಿರುದ್ಧ ಆರೋಪ ನಿಗದಿ.

4ಡಿ. 18, 2002: ಗಿಲಾನಿ, ಶೌಕತ್, ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡಿದ ವಿಶೇಷ ಕೋರ್ಟ್.

4ಆ. 30, 2003: ಶ್ರೀನಗರದಲ್ಲಿ ಗಡಿ ಭದ್ರತಾ ಪಡೆ ಜತೆ 10 ಗಂಟೆಗಳ ಗುಂಡಿನ ಕಾಳಗ ಸಂಸತ್ ಭವನದ ದಾಳಿಯ ಪ್ರಮುಖ ಆರೋಪಿ, ಜೆಇಎಂ ಮುಖಂಡ ಘಾಜಿ ಬಾಬಾ ಹಾಗೂ ಇತರ ಮೂವರು ಉಗ್ರರ ಹತ್ಯೆ.

4ಅ. 29, 2003: ಗಿಲಾನಿಯನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್

4ಆ. 4, 2005: ಅಫ್ಜಲ್ ಗುರು ಮರಣ ದಂಡನೆ ಕಾಯಂಗೊಳಿಸಿದ ಸುಪ್ರೀಂಕೋರ್ಟ್. ಶೌಕತ್ ಹುಸೇನ್ ಗುರುಗೆ ಗಲ್ಲು ಬದಲು 10 ವರ್ಷ ಕಠಿಣ ಸಜೆ.

4ಸೆ. 26, 2006: ಅಫ್ಜಲ್‌ನನ್ನು ನೇಣಿಗೇರಿಸಲು ದೆಹಲಿ ಹೈಕೋರ್ಟ್ ಆದೇಶ.

4ಅ 3. 2006:  ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ಅಫ್ಜಲ್ ಪತ್ನಿ ತಬಸಂ.

4ಜ 12, 2007: ಮರಣ ದಂಡನೆ ಪುನರ್‌ಪರಿಶೀಲನೆಗೆ ಅಫ್ಜಲ್ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಜಾ.

4ಮೇ 19, 2010: ಅಫ್ಜಲ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ದೆಹಲಿ ಸರ್ಕಾರ.

4ಡಿ 30: 2010: ತಿಹಾರ್ ಜೈಲಿನಿಂದ ಶೌಕತ್ ಹುಸೇನ್ ಗುರು ಬಿಡುಗಡೆ.

4ಡಿ 10, 2012: ಅಫ್ಜಲ್ ಗಲ್ಲು ಶಿಕ್ಷೆ ಕಡತವನ್ನು ಪರಿಶೀಲಿಸುವುದಾಗಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿಕೆ.

4ಫೆ 3, 2012: ಅಫ್ಜಲ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ.

4ಫೆ 9, 2013: ತಿಹಾರ್ ಜೈಲಿನಲ್ಲಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಜಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry