ಸೋಮವಾರ, ಜನವರಿ 27, 2020
15 °C

ರಾಜಕೀಯ ಪ್ರೇರಿತ ವರ್ಗಾವಣೆ: ಪುನರ್‌ ಪರಿಶೀಲನೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿ­ಯಲ್ಲಿ ಮುಖ್ಯಮಂತ್ರಿ ಅಥವಾ ಯಾವುದೇ ರಾಜಕಾರಣಿಯ ಶಿಫಾರಸು ಪತ್ರ ಆಧರಿಸಿ ನಡೆದ ವರ್ಗಾವಣೆಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು ಎಂದು ಹೈಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.ಪಾಲಿಕೆಯ ಬಿ.ಟಿ. ಮೋಹನ ಕೃಷ್ಣ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾ­ರಣೆ ನಡೆಸಿದ ನ್ಯಾಯಮೂರ್ತಿ ಎಚ್‌.­ಜಿ.ರಮೇಶ್‌ ಅವರು ಈ ನಿರ್ದೇಶನ ನೀಡಿದ್ದಾರೆ.ರಾಜಕಾರಣಿಗಳ ಶಿಫಾರಸು ಪತ್ರ ಆಧರಿಸಿ ತಮ್ಮ ಜಾಗಕ್ಕೆ ಬೇರೊಬ್ಬರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ಅರ್ಜಿಯಲ್ಲಿ ದೂರಿದ್ದರು. ಅರ್ಜಿ ಮಾನ್ಯ ಮಾಡಲಾಗಿದ್ದು, ವರ್ಗಾ­ವಣೆ ಆದೇಶ ರದ್ದುಗೊಳಿಸಲಾಗಿದೆ.

ಪ್ರತಿಕ್ರಿಯಿಸಿ (+)