ರಾಜಧಾನಿ ಎಕ್ಸ್‌ಪ್ರೆಸ್ ರೈಲು ಬೋಗಿಗೆ ಬೆಂಕಿ

7

ರಾಜಧಾನಿ ಎಕ್ಸ್‌ಪ್ರೆಸ್ ರೈಲು ಬೋಗಿಗೆ ಬೆಂಕಿ

Published:
Updated:

ಗಾಜಿಯಾಬಾದ್ (ಪಿಟಿಐ): ಗುವಾಹಟಿಯತ್ತ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಕಾಲದಲ್ಲಿ ನಿಯಂತ್ರಣಕ್ಕೆ ತರಲಾಯಿತೆಂದು ರೈಲ್ವೆ  ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ದೆಹಲಿ-ಗುವಾಹಟಿ  ರಾಜಧಾನಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಬೋಗಿಯಲ್ಲಿ ಬುಧವಾರ ರಾತ್ರಿ ಸುಮಾರು 10 ಗಂಟೆ ಹೊತ್ತಿಗೆ ಸಾಹಿಬಾಬಾದ್ ರೈಲು ನಿಲ್ದಾಣ ತಲುಪುವ ಮುಂಚೆ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿಸಿದ್ದಾರೆ .ರೈಲು ನವದೆಹಲಿ ರೈಲು ನಿಲ್ದಾಣದಿಂದ ರಾತ್ರಿ ಸುಮಾರು  9.47ಕ್ಕೆ ಹೊರಟನಂತರ ಗಾರ್ಡ್ ಒಬ್ಬರು ಬೋಗಿ ಬಳಿ ಬೆಂಕಿಯ ಉರಿ ಕಂಡು ಸ್ಟೇಷನ್ ಮಾಸ್ಟರ್ ಹಾಗೂ ರೈಲಿನ ಚಾಲಕನಿಗೆ  ತಿಳಿಸಿದ್ದು ರೈಲನ್ನು ನಿಲ್ಲಿಸಲಾಯಿತು ಎಂದು ಅವರು ಹೇಳಿದ್ದಾರೆ.ಬ್ರೇಕ್‌ಗಳು ರೈಲಿನ ಚಕ್ರಗಳಿಗೆ ತಗುಲಿ ಬೆಂಕಿ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಇದನ್ನು ಸರಿಪಡಿ  ಸಿದ ನಂತರ ರೈಲು ಮುಂದೆ ಪ್ರಯಾಣ ಬೆಳಸಿತು. ಬೆಂಕಿ ಕಾಣಿಸಲು ನಿಖಿರವಾದ ಕಾರಣ  ತಿಳಿಯಲು ತನಿಖೆ ನಡೆಸಲಾಗುವುದು ಎಂದು ರೈಲ್ವೆ ಅಧಿಕಾರಿ  ಅಶೋಕ್ ನೇಗಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry