ರಾಜಶ್ರೀ ಸಿಮೆಂಟ್ : 84 ಲಕ್ಷ ಟನ್ ಸಿಮೆಂಟ್ ಉತ್ಪಾದನೆ ಗುರಿ

ಶುಕ್ರವಾರ, ಜೂಲೈ 19, 2019
28 °C

ರಾಜಶ್ರೀ ಸಿಮೆಂಟ್ : 84 ಲಕ್ಷ ಟನ್ ಸಿಮೆಂಟ್ ಉತ್ಪಾದನೆ ಗುರಿ

Published:
Updated:

ಸೇಡಂ: ಸದ್ಯ 42 ಲಕ್ಷ  ಟನ್ ಸಿಮೆಂಟ್ ಉತ್ಪಾದಿಸುತ್ತಿರುವ ರಾಜಶ್ರೀ ಸಿಮೆಂಟ್ ಕಂಪೆನಿ, ರೂ. 3000 ಕೋಟಿ ರೂಪಾಯಿಗಳ ವೆಚ್ಚದಲ್ಲಿ 4ನೇ ಘಟಕ ಆರಂಭಿಸಲಿದೆ ಎಂದು ಸಮೂಹ ಕಾರ್ಯನಿರ್ವಾಹ ನಿರ್ದೇಶಕ ಮತ್ತು ಮುಖ್ಯ ಉತ್ಪಾದನಾ ಅಧಿಕಾರಿ ರತನ್‌ಕುಮಾರ ಶಹಾ `ಪ್ರಜಾವಾಣಿ~ ಗೆ ತಿಳಿಸಿದರು.ಬುಧವಾರ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿತ್ಯ ಬಿರ್ಲಾ ಅಲ್ಟ್ರಾಟೆಕ್ ಕಂಪೆನಿ ಸಮೂಹದ ರಾಜಶ್ರೀ ಸಿಮೆಂಟ್ ಕಂಪೆನಿ ತನ್ನ ನಾಲ್ಕನೇ ಉತ್ಪಾದನೆ ಘಟಕದ ಪ್ರಾರಂಭೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಹೋಂ-ಹವನ ಮತ್ತು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ದಿಸೆಯಲ್ಲಿ ಮುಂಬರುವ ಬರುವ ದಿನಗಳಲ್ಲಿ 84 ಲಕ್ಷ ಟನ್ ಸಿಮೆಂಟ್ ಉತ್ಪಾದಿಸುವ ಗುರಿ ಹೊಂದಿದೆ. 185.5 ಮೆಗಾವಾಟ್ ವಿದ್ಯುತ್ ಉತ್ಪಾದನಾ ಘಟಕಕ್ಕೂ ಕಂಪೆನಿ ಮುಂದಾಗಿದೆ ಎಂದರು.ಈ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 971 ಎಕರೆ ಜಮೀನಿನಲ್ಲಿ ಆರಂಭಗೊಳ್ಳಲಿರುವ 4ನೇ ಘಟಕ ಪ್ರತಿ ದಿನ 10 ಸಾವಿರ ಟನ್ ಸಿಮೆಂಟ್ ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ. ಈ ನೂತನ ಘಟಕದಿಂದ ಸುಮಾರು 400 ಜನರಿಗೆ ಉದ್ಯೋಗ ಅವಕಾಶ ಲಭಿಸಲಿದೆ ಎಂದರು. ಕಂಪೆನಿ ಅಧ್ಯಕ್ಷ ಎಸ್.ಕೆ. ಗುಪ್ತಾ ಮತ್ತು ಪುನಮ್ ಗುಪ್ತಾ ಹವನ-ಹೋಮದಲ್ಲಿ ಭಾಗವಹಿಸಿ ಪೂರ್ಣಾಹುತಿ ಅರ್ಪಿಸಿದರು.ಜಿಪಂ ಸದಸ್ಯ ಶ್ರೀನಾಥ ಪಿಲ್ಲಿ, ತಾಪ ಸದಸ್ಯರು ಮತ್ತು ಮಳಖೇಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಯ್ಯುಬ್ ಖಾನ, ಕಲ್ಯಾಣಪ್ಪ ಬೊಮ್ಮನಳ್ಳಿ, ಅರ್ಜುನಪ್ಪ ಜಮಾದಾರ, ಮಳಖೇಡ, ಹೂಡಾ (ಬಿ), ಹಂಗನಳ್ಳಿ ಗ್ರಾಮಸ್ಥರು ಮತ್ತು ಅಧಿಕ ಸಂಖ್ಯೆಯಲ್ಲಿ ಕಂಪೆನಿಯ ಸಮಸ್ತ ಅಧಿಕಾರಿಗಳು, ಸಿಬ್ಬಂದಿ, ಮಹಿಳೆಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry