ರಾಜಸ್ತಾನದ ಕಲಾಸೊಬಗು

7

ರಾಜಸ್ತಾನದ ಕಲಾಸೊಬಗು

Published:
Updated:

ರಾಜಸ್ತಾನ ಹಸ್ತಕಲಾ ಸಮಿತಿಯು ಏರ್ಪಡಿಸಿರುವ ರಾಜಸ್ತಾನ ಮೇಳದಲ್ಲಿ ಆ ರಾಜ್ಯದ ಶ್ರೀಮಂತ ಕಲಾ ಪರಂಪರೆಯ ಕರಕುಶಲ ಸಾಮಗ್ರಿಗಳ ವೈಭವ ಅನಾವರಣಗೊಂಡಿದೆ. ಜತೆಗೆ ದೇಶದ ವಿವಿಧ ಭಾಗಗಳ ಕರಕುಶಲ ಮತ್ತು ಕೈಮಗ್ಗ ವಸ್ತುಗಳು ಇವೆ. ಸಾಂಪ್ರದಾಯಿಕ ಕಲೆಗಳಲ್ಲೇ ಹೊಸತನ ಕಂಡುಕೊಳ್ಳುತ್ತಿರುವ ಕಲಾವಿದರು ರಚಿಸಿದ ರೂಪಿಸಿದ ಕಲಾತ್ಮಕ ವಸ್ತುವೈಭವ ಕಣ್ಣಾರೆ ಕಾಣಬಹುದು.ಒರಿಸ್ಸಾದ ರೇಷ್ಮೆ ಹಾಗೂ ಸಿಲ್ಕ್ ಕಾಟನ್ ಸೀರೆಗಳು. ಚೆನ್ನೈ ಮತ್ತು ಕೊಲ್ಕತ್ತಾ ಸೀರೆಗಳ ಮೇಲೆ ಗಮನ ಸೆಳೆಯುವಂತಹ ಸೂಕ್ಷ್ಮ ಅಪರೂಪದ ಕಸೂತಿ, ಕಾಶ್ಮೀರಿ ಶಾಲು, ದೇಶದ ವಿವಿಧ ಭಾಗಗಳ ಸೊಗಸಿನ ಡ್ರೆಸ್ ಮೆಟೀರಿಯಲ್‌ಗಳ ಸಾಲೇ ಇದೆ. ಜೈಪುರದ ಬಳೆಗಳು, ಒಂದು ಗ್ರಾಮ್‌ನ ಆಭರಣಗಳು, ಶುದ್ಧ ಬೆಳ್ಳಿಯ ಆಭರಣಗಳು, ಅರೆ ಅಮೂಲ್ಯ ಮತ್ತು ಅಮೂಲ್ಯ ಮಣಿ, ಹರಳುಗಳಿರುವ ವೈಟ್ ಮೆಟಲ್‌ನ ಚೈನುಗಳು ಹಾಗೂ ಬ್ರೇಸ್‌ಲೆಟ್ ವೈವಿಧ್ಯಗಳಿವೆ. ಜೈಕಣಿ ಹಾಗೂ ಮೋನಾಲಿಸಾ ಹರಳುಗಳಿರುವ ರಾಜಸ್ತಾನಿ ಲಾಕ್ ಬಳೆಗಳು ಅತ್ಯಂತ ವೈಭವಯುತವಾಗಿವೆ. ಮನ ಸೆಳೆಯುವ ಅಲಂಕಾರದ ವಸ್ತುಗಳೆಲ್ಲ ಮೈಮೇಲೆ ಇನ್ನೂ ಸುಂದರವಾಗಿ ಕಂಡಾವು. ರಾಜಸ್ತಾನದ ವಿಶಿಷ್ಟ ವಿನ್ಯಾಸಗಳಿರುವ ಬಟ್ಟೆಗಳು, ಮಗ್ಗದ ಬಟ್ಟೆಗಳು ಎಲ್ಲ ಕೈಗೆಟುಕುವ ಬೆಲೆಯಲ್ಲೇ ಇವೆ. ತಮಿಳುನಾಡಿನ ಹ್ಯಾಂಡ್‌ಲೂಮ್ ಕರ್ಟನ್‌ಗಳು, ಹರಿಯಾಣದ ಬೆಡ್‌ಶೀಟುಗಳು, ಕೀ ಹೋಲ್ಡರ್ ಹಾಗೂ ಗೋಡೆಗೆ ತೂಗುಹಾಕುವ ಅಲಂಕಾರಿಕ ವಸ್ತುಗಳಲ್ಲಿ ಆಯ್ಕೆಗೆ ಸಾಕಷ್ಟು ಅವಕಾಶವಿದೆ. ಪೇಂಟಿಂಗ್ ಮಾಡಿದ ಹಾಗೂ ಕೆತ್ತನೆ ಮಾಡಿದ ವಾಲ್‌ನಟ್ ಕಟ್ಟಿಗೆಯ ಪೀಠೋಪಕರಣಗಳು, ಕೆತ್ತನೆಯ ಅಲಂಕಾರಿಕ ವಸ್ತುಗಳೆಲ್ಲ ಮೇಳದ ಮುಖ್ಯ ಆಕರ್ಷಣೆ.ಕಲ್ಲಿನ ಪೇಂಟಿಂಗ್, ಬ್ಲ್ಯಾಕ್ ಮೆಟಲ್, ವೈಟ್ ಮೆಟಲ್ ಮತ್ತು ತಾಮ್ರದಲ್ಲಿ ರಚಿತವಾದ ದೇವ ದೇವತೆಯರ ಮೂರ್ತಿಗಳು ಹಾಗೂ ಅಲಂಕಾರಿಕ ವಸ್ತುಗಳು, ಪುಟ್ಟ ಕಲಾತ್ಮಕ ಆಭರಣ ಪೆಟ್ಟಿಗೆಗಳು ಮನೆಗೊಂದು ಸಾಂಪ್ರದಾಯಿಕ ಶೋಭೆ ನೀಡುವಂತಿವೆ. ಕೊಳ್ಳದೇ ಇರಲು ಸಾಧ್ಯವೆ? ಸ್ಥಳ: ಪ್ರೇಮಚಂದ್ರ ಕಲ್ಯಾಣ ಮಂಟಪ, ಜಯನಗರ (ಅಶೋಕ ಸ್ತಂಭ ಬಳಿ). ಪ್ರದರ್ಶನ ಮಾರ್ಚ್ 6ಕ್ಕೆ ಮುಕ್ತಾಯ.                           

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry