ಶನಿವಾರ, ಜನವರಿ 18, 2020
19 °C

ರಾಜಸ್ತಾನ: ವಸುಂಧರಾ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ): ರಾಜಸ್ತಾನದಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ ತಂದು­ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ  ವಸುಂಧರಾ ರಾಜೆ ಶುಕ್ರವಾರ ಮುಖ್ಯ ಮಂತ್ರಿಯಾಗಿ ಎರಡನೆಯ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು.ಗ್ವಾಲಿಯರ್‌ನ ಸಿಂಧಿಯಾ  ರಾಜ ಮನೆತನಕ್ಕೆ ಸೇರಿದ 60 ವರ್ಷದ ರಾಜೆ ಅವರಿಗೆ ರಾಜ್ಯಪಾಲೆ ಮಾರ್ಗರೇಟ್‌ ಆಳ್ವ ಪ್ರಮಾಣವಚನ ಬೋಧಿಸಿದರು.ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್‌, ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ, ಶಿವರಾಜ ಸಿಂಗ್‌ ಚೌಹಾಣ್‌, ರಮಣ ಸಿಂಗ್‌ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.ಶುಕ್ರವಾರ ರಾಜೆ ಅವರೊಬ್ಬರೆ ಪ್ರಮಾಣವಚನ ಸ್ವೀಕರಿಸಿದರು. ಚುನಾವಣೆ ನಡೆದ 199 ಕ್ಷೇತ್ರಗಳ ಪೈಕಿ ಬಿಜೆಪಿ 162 ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ದಿಗ್ವಿಜಯ ಸಾಧಿಸಿದೆ.

ಪ್ರತಿಕ್ರಿಯಿಸಿ (+)