ರಾಜಸ್ತಾನ ಸಚಿವ ರಾಜೀನಾಮೆ

7

ರಾಜಸ್ತಾನ ಸಚಿವ ರಾಜೀನಾಮೆ

Published:
Updated:

ಜೈಪುರ (ಪಿಟಿಐ): 35 ವರ್ಷದ ಮಹಿಳೆಯೊಬ್ಬಳ ಮೇಲೆ ತಮ್ಮ ಮನೆಯಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಜಸ್ತಾನ ಸರ್ಕಾರದ ಹೈನುಗಾರಿಕೆ, ಖಾದಿ ಖಾತೆ ಸಚಿವ ಬಾಬುಲಾಲ್‌ ನಗರ್‌(53)  ಗುರುವಾರ ರಾಜೀನಾಮೆ ನೀಡಿದ್ದಾರೆ.‘ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ ನನಗ್ಯಾರೂ ರಾಜೀ­ನಾಮೆ ನೀಡಲು ಒತ್ತಡವನ್ನೂ ತಂದಿಲ್ಲ. ಆದಾಗ್ಯೂ ನಿಷ್ಪಕ್ಷ­ಪಾತ ತನಿಖೆ ನಡೆಯುವಂತಾಗಲು  ನೈತಿಕತೆಯ ಆಧಾರ­ದಲ್ಲಿ  ರಾಜೀನಾಮೆ ನೀಡುತ್ತಿದ್ದೇನೆ’ ಎಂದು ನಗರ್‌ ಸುದ್ದಿಗಾರರಿಗೆ ತಿಳಿಸಿದರು. ಈ ತಿಂಗಳ 11 ರಂದು ತಮ್ಮ ಅಧಿಕೃತ ನಿವಾಸಕ್ಕೆ ಮಹಿಳೆ­ಯೊಬ್ಬಳನ್ನು ಕರೆಯಿಸಿಕೊಂಡ ನಗರ್‌ ಆಕೆಯ ಮೇಲೆ  ಅತ್ಯಾಚಾರ, ಬೆದರಿಕೆ ಹಾಗೂ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಸೊಡಾಲಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.ರಾಜ್ಯದ ಸಿಐಡಿ ತಂಡ ಪ್ರಕರಣ ತನಿಖೆ ಕೈಗೊಂಡಿದ್ದು ಮಹಿಳೆಯ ಹೇಳಿಕೆ ಧ್ವನಿಮುದ್ರಿಸಿ-­ಕೊಳ್ಳಲಾಗಿದೆ. ಪ್ರಕರಣದ ಕುರಿತು ಮುಖ್ಯಮಂತ್ರಿ ಅಶೋಕ್‌ ಗೆಹ್ಲೊಟ್‌ ‘ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಅಸಾರಾಂ ಬಾಪು ಪ್ರಕರಣದಲ್ಲೂ ನಾನು ಇದನ್ನೇ ಹೇಳಿದ್ದೆ’ ಎಂದು  ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ ಸಿಐಡಿ ಅಪರಾಧ ವಿಭಾಗದ ಹೆಚ್ಚುವರಿ ಎಸ್ಪಿ ವಿ.ಕೆ. ಗೌರ್‌ ನೇತೃತ್ವದ ತಂಡ ಸಂತ್ರಸ್ತೆ ಮಹಿಳೆ ಜತೆ ಬುಧವಾರ ರಾತ್ರಿ ನಗರ್‌ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ರಾತ್ರಿ ಹೊತ್ತು ಮಹಿಳೆಯನ್ನು ನಗರ್‌ ಮನೆಗೆ ಕರೆ­ದೊಯ್ದ ಪೊಲೀಸರ ಕ್ರಮವನ್ನು ಟೀಕಿಸಿರುವ ಸ್ವಯಂ­ಸೇವಾ ಸಂಸ್ಥೆ ಪಿಯು­ಸಿಎಲ್‌ ಸಂಚಾಲಕಿ ಕವಿತಾ ಶ್ರೀವಾಸ್ತವ, ‘ಇದು ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry