ಬುಧವಾರ, ಜುಲೈ 15, 2020
27 °C

ರಾಜಾತಿಥ್ಯದಿಂದ ಪುನೀತ

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ರಾಜಾತಿಥ್ಯದಿಂದ ಪುನೀತ

ಭಾರತ- ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯ ಮುಗಿದಿದ್ದರೂ ಟಿಕೆಟ್ ಗದ್ದಲ ಇನ್ನೂ ನಿಂತಿಲ್ಲ. ಕ್ರಿಕೆಟ್ ಪ್ರೇಮಿಗಳಂತೂ ನಿದ್ರೆ, ಊಟ-ಆಹಾರ ಬಿಟ್ಟು ಸರತಿ ಸಾಲಿನಲ್ಲಿ ನಿಂತು, ಲಾಟಿ ಏಟು ತಿಂದರೂ ಟಿಕೆಟ್ ಸಿಗದೆ ಉಸ್ಸಪ್ಪಾ ಎಂದು ಮನೆ ದಾರಿ ಹಿಡಿದಿದ್ದರು.ಆದರೆ ಕೆಲವೇ ಕೆಲವು ಮಂದಿಗೆ ಮಾತ್ರ ಇಂಥ ಯಾವುದೇ ಗೋಜಲು ಇರಲಿಲ್ಲ. ಪಂದ್ಯ ವೀಕ್ಷಣೆಗೆ ಅನುಕೂಲವಾಗುವಂಥ ಆಸನಗಳೇ ಅವರಿಗಾಗಿ ಕಾದಿದ್ದವು. ಉಚಿತ ಟಿ-ಶರ್ಟ್, ಕ್ಯಾಪ್‌ಗಳು ಉಡುಗೊರೆಯಾಗಿ ಸಿಕ್ಕವು. ಹೌದು, ಬೆಂಗಳೂರಿನ ಕೆಲವೇ ಕೆಲವು ಮಂದಿಗೆ ಕ್ಯಾಸ್ಟ್ರಾಲ್ ಈ ಎಲ್ಲಾ ಸವಲತ್ತುಗಳನ್ನು ನೀಡಿತ್ತು. ಸಾವಿರಾರು ಕ್ರಿಕೆಟ್ ಪ್ರೇಮಿಗಳ ನಡುವೆ ಪಂದ್ಯದ ನೇರ ವೀಕ್ಷಣೆಯ ಅವಕಾಶ ಕಲ್ಪಿಸಿತ್ತು. ಕಾರಣ ಇಷ್ಟೇ. ಇವರೆಲ್ಲ ಕ್ಯಾಸ್ಟ್ರಾಲ್ ಲೂಬ್ರಿಕೆಂಟ್ ಖರೀದಿಸಿ ಅದರಲ್ಲಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗೆದ್ದ ಅದೃಷ್ಟಶಾಲಿಗಳು. ಅದರಲ್ಲೂ ಬೊಮ್ಮನಹಳ್ಳಿಯ ಪುನೀತ್ ಅವರದ್ದು ಕೊಂಚ ವಿಶೇಷ.ಕ್ಯಾಸ್ಟ್ರಾಲ್‌ಗೆ ಮೀಸಲಾದ ಆಸನಗಳ ನಡುವೆ ಸಿಂಹಾಸನದಂಥ ದೊಡ್ಡ ಆಸನದಲ್ಲಿ ಇವರನ್ನು ಕೂರಿಸಲಾಗಿತ್ತು. ತಲೆಗೊಂದು ಜರಿ ಪೇಟ, ಅತ್ತ ಇತ್ತ ಹಸಿರುಡುಗೆ ತೊಟ್ಟ ಲಲನೆಯರು, ಹಿಂದೆ ಅಜಾನುಬಾಹು ಸೂಟ್‌ಧಾರಿ ಎಸ್ಕಾರ್ಟ್‌ಗಳ ಪ್ರಭಾವಳಿ ಇವರಿಗಿತ್ತು. ಏಕೆಂದರೆ,  ಪುನೀತ್ ಆ ದಿನದ ಕ್ಯಾಸ್ಟ್ರಾಲ್ ವಿಶ್ವಕಪ್ ಹೀರೊ. ‘ತನ್ನ ಗ್ರಾಹಕರೇ ನಿಜವಾದ ರಾಜರು’ ಎಂಬ ಧ್ಯೇಯವಾಕ್ಯ ಹೊಂದಿರುವ ಕ್ಯಾಸ್ಟ್ರಾಲ್ ಗ್ರಾಹಕರ ಹೀರೋಗೆ ವಿಶೇಷ ಮನ್ನಣೆ ನೀಡಿತ್ತು.ಬೊಮ್ಮನಹಳ್ಳಿಯಲ್ಲಿ ಆರ್.ಕೆ. ಸರ್ವೀಸ್ ಸೆಂಟರ್ ಹೊಂದಿರುವ ಪುನೀತ್ ಕ್ಯಾಸ್ಟ್ರಾಲ್ ಗ್ರಾಹಕ. ‘ಕುತೂಹಲದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡೆ. ನನ್ನ ಅದೃಷ್ಟ ಇಂಥದ್ದೊಂದು ವಿಶೇಷ ಆಸನದಲ್ಲಿ ಕೂತಿದ್ದೇನೆ. ದೊಡ್ಡ ಹೋಟೆಲ್‌ಗಳಲ್ಲಿ ಊಟ, ರಾಜಾತಿಥ್ಯ ಎಲ್ಲವೂ ನನ್ನ ಪಾಲಿಗೆ ಬಂದಿವೆ. ಬಹಳ ಸಂತೋಷವಾಗಿದೆ’ ಎಂದು ಪಂದ್ಯ ವೀಕ್ಷಿಸುತ್ತಲೇ ತಮಗಾದ ಸಂತೋಷವನ್ನು ಹಂಚಿಕೊಂಡರು.ಇಷ್ಟೇ ಅಲ್ಲ, ಕ್ಯಾಸ್ಟ್ರಾಲ್‌ನ ಪ್ರಚಾರ ರಾಯಭಾರಿಯಾಗಿರುವ ಸಚಿನ್ ತೆಂಡೂಲ್ಕರ್ ಅವರಿಂದ ಕ್ಯಾಸ್ಟ್ರಾಲ್ ಹೀರೊಗೆ ವಿಶೇಷ ಆಹ್ವಾನ, ತಾವಿರುವ ನಗರವನ್ನು ಹೊರತುಪಡಿಸಿ ಬೇರೆ ನಗರದಲ್ಲಿ ಪಂದ್ಯಗಳಿದ್ದರೆ ಅಲ್ಲಿಗೆ ವಿಮಾನದಲ್ಲಿ ಪ್ರಯಾಣ, ತಾರಾ ಹೋಟೆಲುಗಳಲ್ಲೇ ವಸತಿ, ಪ್ರತಿ ಪಂದ್ಯ ವೀಕ್ಷಣೆಗೂ ವಿಶೇಷ ಆಸನ, ಬೃಹತ್ ಪರದೆಯ ಮೇಲೆ ಆಗಾಗ್ಗೆ ಮೂಡುವ ಹೀರೋ ಹೆಸರು, ಪಂದ್ಯ ಆರಂಭದಲ್ಲಿ ಹಾಗೂ ಮಧ್ಯೆ ಸಂದರ್ಶನ ಇತ್ಯಾದಿ ಇತ್ಯಾದಿ ಅಚ್ಚರಿಯ ಉಡುಗೊರೆಗಳು ಕ್ಯಾಸ್ಟ್ರಾಲ್ ವಿಶ್ವಕಪ್ ಹೀರೋ ಪಾಲಿಗಿವೆ.ಇವರೊಂದಿಗೆ ಇನ್ನಿತರ ಇಪ್ಪತ್ತು ವಿಜೇತರಿಗೆ ಟಿ-ಶರ್ಟ್, ಕ್ಯಾಪ್, ಪಂದ್ಯ ವೀಕ್ಷಣೆಗೆ ವಿಶೇಷ ಪ್ರವೇಶ ಪತ್ರಗಳು ದೊರಕಿದ್ದವು. ಇವರಲ್ಲಿ ಹಲವರು ಮೆಕ್ಯಾನಿಕ್‌ಗಳು, ಇನ್ನೂ ಕೆಲವರು ತಮ್ಮ ಬೈಕ್‌ಗಳಿಗೆ ಕ್ಯಾಸ್ಟ್ರಾಲ್ ಲೂಬ್ರಿಕೆಂಟ್ ಬಳಸುವ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು. ಹೀಗೆ ಹಲವು ವರ್ಗಗಳ ಗ್ರಾಹಕರಿಗೆ ಕ್ಯಾಸ್ಟ್ರಾಲ್ ತನ್ನದೇ ಆದ ರೀತಿಯಲ್ಲಿ ಧನ್ಯವಾದ ಅರ್ಪಿಸಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.