ರಾಜಾ ಜಾಮೀನಿಗೆ ಸಿಬಿಐ ವಿರೋಧ

7

ರಾಜಾ ಜಾಮೀನಿಗೆ ಸಿಬಿಐ ವಿರೋಧ

Published:
Updated:

ನವದೆಹಲಿ (ಪಿಟಿಐ):  2ಜಿ ತರಂಗಾಂತರ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರು ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ.ರಾಜಾ ಹಾಗೂ ಇತರ ಸರ್ಕಾರಿ ಅಧಿಕಾರಿಗಳು ರೂ 200 ಕೋಟಿ ಲಂಚ ಸ್ವೀಕರಿಸಿದ್ದಾರೆ ಎಂಬ ಹೊಸ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಬೇಕಾಗಿರುವುದರಿಂದ, ಅವರಿಗೆ ಜಾಮೀನು ನೀಡಬಾರದು ಎಂದು ಸಿಬಿಐ ಪರ ನ್ಯಾಯವಾದಿ ಎ.ಕೆ.ಸಿಂಗ್ ತಿಳಿಸಿದರು. ಆದರೆ, 2ಜಿ ಹಗರಣದಲ್ಲಿ ಇತರ ಆರೋಪಿಗಳಿಗೆ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ, ರಾಜಾ ಅವರಿಗೂ ಜಾಮೀನು ನೀಡಬೇಕೆಂದು ರಾಜಾ ಪರ ವಕೀಲರು ಕೋರಿದರು. ನ್ಯಾಯಾಲಯ ತೀರ್ಪನ್ನು ಮೇ 15ಕ್ಕೆ ಕಾಯ್ದಿರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry