ಸೋಮವಾರ, ಮೇ 17, 2021
25 °C

ರಾಜಾ ಬೆಂಬಲಿಸಲು ಎಐಎಡಿಎಂಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಆರು ರಾಜ್ಯಸಭಾ ಸ್ಥಾನಗಳಿಗೆ ಜೂನ್ 27ರಂದು ಜರಗುವ ಚುನಾವಣೆಯಲ್ಲಿ ತನ್ನ ಅಭ್ಯರ್ಥಿ ಡಿ.ರಾಜಾ ಅವರನ್ನು ಬೆಂಬಲಿಸುವಂತೆ ಮಾಡಿದ ಸಿಪಿಐನ ಮನವಿಗೆ ಸೋಮವಾರ ಸಮ್ಮತಿ ಸೂಚಿಸಿರುವ ಆಡಳಿತಾರೂಢ ಎಐಎಡಿಎಂಕೆ ಚುನಾವಣಾ ಕಣದಿಂದ ತನ್ನೊಬ್ಬ ಸ್ಪರ್ಧಿಯನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಘೋಷಿಸಿದೆ.ಬೆಂಬಲ ಕೋರಿ ಬೆಳಿಗ್ಗೆ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರನ್ನು ಭೇಟಿ ಮಾಡಲು ಬಯಸಿದ್ದ ರಾಜಾ ಅವರು ಮಾತುಕತೆಯ ವೇಳೆ ಜಯಲಲಿತಾ ಅವರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಅವರ ಮನ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ ಜಯಲಲಿತಾ ಅವರು ಪಕ್ಷವು ರಾಜಾ ಅವರ ಅಭ್ಯರ್ಥಿತನಕ್ಕೆ ಬೆಂಬಲವನ್ನು ವಿಸ್ತರಿಸುತ್ತದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.