ಸೋಮವಾರ, ನವೆಂಬರ್ 18, 2019
23 °C

ರಾಜಾ ಭಯ್ಯಾಗೆ ಸಿಬಿಐ ನೋಟಿಸ್

Published:
Updated:

ಲಖನೌ (ಐಎಎನ್‌ಎಸ್): ಉತ್ತರ ಪ್ರದೇಶದ ಬಲಿಪುರ ಎಂಬಲ್ಲಿ ಮಾರ್ಚ್  2ರಂದು ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಘುರಾಜ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರಿಗೆ ನೋಟಿಸ್ ಜಾರಿ ಮಾಡಿರುವ ಸಿಬಿಐ ವಾರದೊಳಗೆ ತನ್ನ ಮುಂದೆ ಹಾಜರಾಗಲು ಸೂಚಿಸಿದೆ.ಈ ಸಂಬಂಧ ಸಿಬಿಐ ಪ್ರಾಥಮಿಕ ತನಿಖೆ ಕೈಗೊಂಡಿದ್ದು, ಪ್ರಕರಣದಲ್ಲಿ ಭಯ್ಯಾ ಅವರ ಪಾತ್ರದ ಬಗ್ಗೆ ಹೇಳಿಕೊಳ್ಳುವ ಸಾಕ್ಷ್ಯಾಧಾರಗಳೇನೂ ಸಿಕ್ಕಿಲ್ಲ ಎನ್ನಲಾಗಿದೆ.

ಬಲಿಪುರ ಗ್ರಾಮದ ಮುಖಂಡ ನನ್ನೇ ಯಾದವ್, ಅವರ ಸಹೋದರ ಸುರೇಶ್ ಹಾಗೂ ಡಿಎಸ್‌ಪಿ ಜಿಯಾ ಉಲ್ ಹಕ್ ಈ ಪ್ರಕರಣದಲ್ಲಿ ಕೊಲೆಯಾಗಿದ್ದರು.

ಪ್ರತಿಕ್ರಿಯಿಸಿ (+)