ರಾಜಾ ವಿಚಾರಣೆ
ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಗುರುವಾರ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರನ್ನು ಪ್ರಶ್ನಿಸಿದೆ.
ರಾಜಾ ಅವರನ್ನು ವಿಚಾರಣೆ ನಡೆಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ರಾಜಾ ಅವರು ಸಚಿವರಾಗಿದ್ದ ವೇಳೆ ನಡೆದ ತರಂಗಾಂತರ ಹಂಚಿಕೆ ಕುರಿತಂತೆ ಹಾಗೂ ಅವರ ವೈಯಕ್ತಿಕ ಸಂಪತ್ತಿನ ಬಗ್ಗೆ ಜಾರಿ ನಿರ್ದೇಶನಾಲಯ ರಾಜಾ ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿತು. ಜೊತೆಗೆ ಪರವಾನಗಿಗಳನ್ನು ನೀಡುವಲ್ಲಿ ಸಚಿವಾಲಯ ವಹಿಸಿದ ಪಾತ್ರದ ಕುರಿತೂ ರಾಜಾರನ್ನು ಪ್ರಶ್ನಿಸಲಾಯಿತೆಂದು ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.