ರಾಜಿನಾಮೆ ಪ್ರಹಸನ!

ಶನಿವಾರ, ಜೂಲೈ 20, 2019
24 °C

ರಾಜಿನಾಮೆ ಪ್ರಹಸನ!

Published:
Updated:

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್, ಇತ್ತೀಚೆಗೆ ನಿವೇಶನ ಹಗರಣದಲ್ಲಿ ಆಪಾದನೆ ಬಂದ ಕೂಡಲೇ ತಕ್ಷಣ ರಾಜೀನಾಮೆ ಕೊಟ್ಟರು.ನಿವೇಶನವನ್ನೂ ವಾಪಸ್ ಮಾಡಿದರು! ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಆರೋಪ ಅವರ ಮೇಲಿತ್ತು. ಆದರೆ ಸಿ.ಎಂ. ಸದಾನಂದಗೌಡರು ಈ ಆರೋಪ ಕುರಿತು ವಿಚಾರಣೆ ಮಾಡಿ ಅಭಿಪ್ರಾಯ ತಿಳಿಸಲು ಅಡ್ವೊಕೇಟ್ ಜನರಲ್‌ರನ್ನು ಕೋರಿದರು!ಸಿ.ಎಂ. ರಿಂದ ನೇಮಕವಾದ ಅಡ್ವೊಕೇಟ್ ಜನರಲ್‌ಅವರು ಸುರೇಶ್‌ಕುಮಾರರಿಗೆ ಕ್ಲೀನ್‌ಚಿಟ್ ಕೊಟ್ಟ ತಕ್ಷಣ ಅವರು ರಾಜೀನಾಮೆ ವಾಪಸ್ ಪಡೆದದ್ದು ಮಾತ್ರ `ರಾಜಿ~ನಾಮೆ ಪ್ರಹಸನ ಎನಿಸಿಬಿಟ್ಟಿತು! ತಪ್ಪು ಮಾಡಿರದಿದ್ದರೆ ನಿವೇಶನ ವಾಪಸ್ ಮಾಡಿದ್ದೇಕೆ?

.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry