ರಾಜಿ ಸಂಧಾನದಿಂದ ಸ್ನೇಹ-ಶಾಂತಿ

7

ರಾಜಿ ಸಂಧಾನದಿಂದ ಸ್ನೇಹ-ಶಾಂತಿ

Published:
Updated:
ರಾಜಿ ಸಂಧಾನದಿಂದ ಸ್ನೇಹ-ಶಾಂತಿ

ಬನಹಟ್ಟಿ: `ನ್ಯಾಯಾಲಯದಲ್ಲಿರುವ ಪ್ರಕರಣ ಗಳನ್ನು ಕಕ್ಷಿದಾರರು ರಾಜಿ ಸಂಧಾನದ ಮೂಲಕ ಮುಗಿಸಿಕೊಂಡು ಸ್ನೇಹದಿಂದ ಬಾಳಬೇಕು. ಇದ ರಿಂದ ಕಕ್ಷಿದಾರರ ಹಣ ಹಾಗೂ ಸಮಯ ಉಳಿತಾಯವಾಗುತ್ತದೆ, ಮಾನಸಿಕ ನೆಮ್ಮದಿ ಸಿಗುತ್ತದೆ~ ಎಂದು ಸ್ಥಳೀಯ ದಿವಾಣಿ ನ್ಯಾಯಾ ಲಯದ ನ್ಯಾಯಾಧೀಶ ಈಶ್ವರ ನುಡಿದರು. ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬನಹಟ್ಟಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಮೂರು ತಿಂಗಳು ನಡೆದ ಲೋಕಅದಾಲತ್‌ನ ಮುಕ್ತಾಯ ಸಮಾ ರಂಭದಲ್ಲಿ ಮಾತನಾಡಿದರು. ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ಲೋಕ ಅದಾಲತ್‌ಗಳಲ್ಲಿ ಮುಗಿಸಿಕೊಂಡು ನೆಮ್ಮದಿಯ ಬಾಳು ನಡೆಸಲು ಮುಂದಾಗಬೇಕು ಎಂದು ಸಲಹೆ ನೀಡಿದ ಅವರು, ರಾಜಿ ಸಂಧಾನಗಳ ಮೂಲಕ ಪ್ರಕರಣಗಳನ್ನು ಮುಗಿಸಿಕೊಂಡರೆ ದ್ವೇಷ ಮನೋಭಾವ  ಉಳಿಯುವುದಿಲ್ಲ ಎಂದು  ಹೇಳಿದರು.ವಕೀಲ ಈಶ್ವರಚಂದ್ರ ಭೂತಿ ಮಾತನಾಡಿ, ಬನ ಹಟ್ಟಿ ನ್ಯಾಯಾಲಯ ರಾಜಿ ಸಂಧಾನಗಳ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಜಿಲ್ಲೆಗೆ ಎರಡನೆಯ ಸ್ಥಾನದಲ್ಲಿದ್ದು ಇದು ಹೆಮ್ಮೆಯ ವಿಷಯ ಎಂದು ತಿಳಿಸಿದರು.ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿ ದಾರರು ಇಂಥ ಬೆಳವಣಿಗೆಗೆ ಕಾರಣ ಎಂದು ಅವರು ಹೇಳಿದರು.

ವಕೀಲ ಎಂ.ಜಿ.ಕೆರೂರು, ಸಿಪಿಐ ಎಂ.ಬಿ.ಸಂಕದ ಮುಂತಾದವರು ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ ನಿಂಗಸಾನಿ ಅಧ್ಯಕ್ಷತೆ ವಹಿಸಿದ್ದರು.ಸಹಾಯಕ ಸರ್ಕಾರಿ ಅಭಿಯೋಜಕ ದಿನೇಶ ಮುಗಳಿ, ಪಿಎಸ್‌ಐ ಎಸ್.ಎಸ್.ಕಮತಗಿ, ಉಪ ಖಜಾನಾಧಿಕಾರಿ ಎಸ್.ಎಲ್. ಬೆಳ್ಳಂಕಿ ಮತ್ತಿತರರು ಉಪಸ್ಥಿತರಿದ್ದರು.ವಿಶ್ವನಾಥ ಮುಗತಿ ಸ್ವಾಗತಿಸಿದರು. ಎಸ್.ಜಿ.ಕುಲಕರ್ಣಿ ವಂದಿಸಿದರು. ಎಸ್.ಎಸ್. ಷಣ್ಮುಖ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry