ಗುರುವಾರ , ಏಪ್ರಿಲ್ 22, 2021
30 °C

ರಾಜೀನಾಮೆಗೆ ಒತ್ತಾಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು (ಪಿಟಿಐ): ಸಂವಿಧಾನ ರಚನೆಯ ಬಿಕ್ಕಟ್ಟು ಬಗೆಹರಿಯುವ ಮೊದಲೇ ಪ್ರಧಾನಿ ಬಾಬುರಾಂ ಭಟ್ಟಾರಾಯ್ ಅವರು ರಾಜೀನಾಮೆ ನೀಡಿದರೆ ದೇಶವು ಮಹಾ ವಿಪತ್ತನ್ನು ಎದುರಿಸಬೇಕಾಗುತ್ತದೆ ಎಂದು ನೇಪಾಳದ ಆಡಳಿತ ಪಕ್ಷದ ಮುಖ್ಯಸ್ಥ ಪ್ರಚಂಡ ಅವರು ವಿರೋಧ ಪಕ್ಷಗಳಿಗೆ ಎಚ್ಚರಿಸಿದ್ದಾರೆ.ಸಂವಿಧಾನ ರಚನೆಯ ಬಗ್ಗೆ ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬರುವ ಮೊದಲೇ ಪ್ರಧಾನಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳಾದ ನೇಪಾಳಿ ಕಾಂಗ್ರೆಸ್, ಸಿಪಿಎನ್-ಯುಎಂಎಲ್ ಮುಖಂಡರ ವರ್ತನೆಯನ್ನು ಪ್ರಚಂಡ ಖಂಡಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.