ಶುಕ್ರವಾರ, ಮೇ 14, 2021
21 °C

`ರಾಜೀನಾಮೆಯಿಂದ ಸಮಸ್ಯೆ ನೀಗದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಐಪಿಎಲ್‌ನಲ್ಲಿ ನಡೆದಿರುವ ಎಲ್ಲ `ಗೊಂದಲ'ಗಳಿಗೆ ರಾಜೀವ್ ಶುಕ್ಲಾ ಕಾರಣ ಎಂದು ಲೀಗ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಆರೋಪಿಸಿದ್ದು, ಅವರ ರಾಜೀನಾಮೆಯಿಂದ ಸಮಸ್ಯೆಗಳು ನೀಗದು ಎಂದಿದ್ದಾರೆ.ಶುಕ್ಲಾ ಐಪಿಎಲ್ ಮುಖ್ಯಸ್ಥನ ಹುದ್ದೆಗೆ ಅಯೋಗ್ಯ ಎಂಬುದನ್ನು ಮ್ಯಾಚ್‌ಫಿಕ್ಸಿಂಗ್ ಪ್ರಕರಣ ತೋರಿಸಿಕೊಟ್ಟಿದೆ ಎಂದು ಅವರು `ಟ್ವಿಟರ್'ನಲ್ಲಿ ಬರೆದಿದ್ದಾರೆ.

`ರಾಜೀವ್ ಶುಕ್ಲಾ... ರಾಜೀನಾಮೆ ನೀಡುವ ಮೂಲಕ ಎಲ್ಲ ರೀತಿಯ ಆರೋಪಗಳಿಂದ ಹೊರಬರಬಹುದು ಎಂದು ಭಾವಿಸಬೇಡಿ.

ನಿಮ್ಮ ಅಧಿಕಾರದ ಅವಧಿಯಲ್ಲಿ ಈ ವಿವಾದಗಳು ನಡೆದಿವೆ. ಒಂದೋ ನೀವು ಈ ಹುದ್ದೆಗೆ ಅಯೋಗ್ಯ ಅಥವಾ ಈಗ ನಡೆದಿರುವ ಹಗರಣದಲ್ಲಿ ಭಾಗಿಯಾಗಿದ್ದೀರಿ' ಎಂದು ಮೋದಿ ನುಡಿದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.