ಭಾನುವಾರ, ಸೆಪ್ಟೆಂಬರ್ 22, 2019
23 °C

ರಾಜೀನಾಮೆ ಅಂಗೀಕರಿಸಿ

Published:
Updated:

ಬಳ್ಳಾರಿ: ಶಾಸಕ ಸ್ಥಾನಕ್ಕೆ ಇತ್ತೀಚೆಗೆ ಸಲ್ಲಿಸಿರುವ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿಧಾನಸಭಾಧ್ಯಕ್ಷ ಬೋಪಯ್ಯ ಅವರಿಗೆ ಮನವಿ ಮಾಡುವುದಾಗಿ ಬಿ.ಶ್ರೀರಾಮುಲು ತಿಳಿಸಿದ್ದಾರೆ.ನಗರದಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋಪಯ್ಯ ಅವರು ನಿಯಮಾನುಸಾರ ರಾಜೀನಾಮೆಯನ್ನು ಅಂಗೀಕರಿಸುವರು ಎಂಬ ವಿಶ್ವಾಸವಿದೆ ಎಂದರು.ರಾಜೀನಾಮೆ ನೀಡಿರುವುದಕ್ಕೆ ಬೋಪಯ್ಯ ಅವರು ಕಾರಣ ಕೇಳಿದ್ದು, ಕಾನೂನು ತಜ್ಞರು ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ಸೂಕ್ತ ದಾಖಲೆಗಳೊಂದಿಗೆ ಶೀಘ್ರವೇ ಅವರನ್ನು ಭೇಟಿ ಮಾಡಿ, ಸ್ಪಷ್ಟನೆ ನೀಡಿ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡುವುದಾಗಿ ಅವರು ವಿವರಿಸಿದರು.

 

Post Comments (+)