ರಾಜೀನಾಮೆ ನೀಡಲ್ಲ: ಗಡ್ಕರಿ

7

ರಾಜೀನಾಮೆ ನೀಡಲ್ಲ: ಗಡ್ಕರಿ

Published:
Updated:

ನವದೆಹಲಿ (ಪಿಟಿಐ):  ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ಹಣ ಹೂಡಿಕೆ ನಡೆಸಿದ ಆರೋಪದ ಮೇಲೆ ರಾಜೀನಾಮೆ ನೀಡಬೇಕು ಎಂಬ ಪಕ್ಷದ ಕೆಲವು ಮುಖಂಡರ ಬೇಡಿಕೆಯನ್ನು ತಳ್ಳಿಹಾಕಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ತಾನೊಬ್ಬ `ಪ್ರಾಮಾಣಿಕ ವ್ಯಕ್ತಿ' ಎಂದು ಸ್ಪಷ್ಟಪಡಿಸಿದ್ದಾರೆ.ಟಿವಿ ಟುಡೆ ಆಯೋಜಿಸಿದ್ದ 2 ದಿನಗಳ `ಅಜೆಂಡಾ ಆಜ್ ತಕ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ಮೇಲಿನ ಆರೋಪಗಳು ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಕ್ಷ ನಡೆಸುತ್ತಿರುವ ಹೋರಾಟಕ್ಕೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಗಡ್ಕರಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮುಖಂಡರಾದ ರಾಮ್ ಜೇಠ್ಮಲಾನಿ ಮತ್ತು ಯಶವಂತ ಸಿನ್ಹಾ ಆಗ್ರಹಿಸಿದ್ದರು.`ತಾನೊಬ್ಬ ಉದ್ದಿಮೆದಾರನಲ್ಲ, ಆದರೆ ಸಾಮಾಜಿಕ ಕಾಳಜಿಯ ಉದ್ಯಮಿಯಾಗಿದ್ದು, ತಮ್ಮ ವಿರುದ್ಧದ ಆರೋಪಗಳಾವುವೂ ಸಾಬೀತಾಗಿಲ್ಲ' ಎಂದು ಗಡ್ಕರಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry