ಮಂಗಳವಾರ, ನವೆಂಬರ್ 12, 2019
28 °C

ರಾಜೀನಾಮೆ ವದಂತಿ: ಅಜಿತ್ ಸ್ಪಷ್ಟನೆ

Published:
Updated:

ಸತಾರಾ(ಮಹಾರಾಷ್ಟ್ರ)(ಪಿಟಿಐ):`ನನ್ನ ರಾಜೀನಾಮೆ ವಿಷಯದಲ್ಲಿ ಪಕ್ಷದ ಶಾಸಕರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇನೆ' ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸ್ಪಷ್ಟಪಡಿಸಿದ್ದಾರೆ.ಬರ ಪರಿಸ್ಥಿತಿ ಕುರಿತಂತೆ ಪವಾರ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಅವರ ರಾಜೀನಾಮೆಯ ವದಂತಿ ಕೇಳಿಬಂದಿತ್ತು.`ಕಳೆದ ಬಾರಿ ರಾಜೀನಾಮೆ ನೀಡಿದ್ದು ವ್ಯಕ್ತಿಗತ ನಿರ್ಧಾರ. ಈ ಬಾರಿ ಪಕ್ಷದ ಎಲ್ಲ ಶಾಸಕರ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ' ಎಂದು ಸುದ್ದಿಗಾರರಿಗೆ ತಿಳಿಸಿದರು.`ಜಲಾಶಯಗಳಲ್ಲಿ ನೀರಿಲ್ಲದಿದ್ದರೆ ನಾವು ಅಲ್ಲಿ ಹೋಗಿ ಮೂತ್ರ ವಿಸರ್ಜನೆ ಮಾಡಬೇಕೆ' ಎಂದು ಪವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಪವಾರ್ ರಾಜೀನಾಮೆಗೆ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆ ಪಟ್ಟು ಹಿಡಿದಿವೆ.

ಪ್ರತಿಕ್ರಿಯಿಸಿ (+)