ಗುರುವಾರ , ಮೇ 6, 2021
23 °C

ರಾಜೀನಾಮೆ ವಾಪಸ್ಸಿಗೆ ಅಡ್ವಾಣಿ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜೀನಾಮೆ ವಾಪಸ್ಸಿಗೆ ಅಡ್ವಾಣಿ ಸಮ್ಮತಿ

ನವದೆಹಲಿ (ಪಿಟಿಐ): ಮಾಜಿ ಉಪ ಪ್ರಧಾನಿ ಎಲ್. ಕೆ. ಅಡ್ವಾಣಿ  ಬಿಜೆಪಿಯ ಎಲ್ಲಾ ಸ್ಥಾನಗಳಿಗೆ ನೀಡಿದ್ದ ರಾಜೀನಾಮೆಯನ್ನು  ಹಿಂಪಡೆಯಲು ತೀರ್ಮಾನಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಇದರಿಂದಾಗಿ ಬಿಜೆಪಿಯಲ್ಲಿ ಉಂಟಾಗಿದ್ದ  ಅತಂಕಕ್ಕೆ ತೆರೆ ಬಿದ್ದಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ಅಡ್ವಾಣಿ ಪಕ್ಷದ ತೀರ್ಮಾನಕ್ಕೆ ಬದ್ಧರಿರುವುದಾಗಿ ತಿಳಿಸಿದ್ದು ಸೋಮವಾರ ನಿಡಿದ್ದ ರಾಜೀನಾಮೆಯನ್ನು ವಾಪಸು ಪಡೆಯುದಾಗಿ ತಿಳಿಸಿದ್ದಾರೆ ಎಂದರು.ಬಿಜೆಪಿಯ ಹಿರಿಯ ನಾಯಕರು ಮತ್ತು ಆರ್‌ಎಸ್‌ಎಸ್‌ನ ವರಿಷ್ಠರು ನಡೆಸಿದ ಸಂಧಾನ ಫಲ ನೀಡಿದ್ದು ಅಡ್ವಾಣಿ ರಾಜೀನಾಮೆ ಹಿಂಪಡೆಯಲು ಸಮ್ಮತಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.