ರಾಜೀನಾಮೆ ಹಿಂದಕ್ಕೆ ಪಡೆದ 9 ಭಿನ್ನಮತೀಯ ಸಚಿವರು

ಮಂಗಳವಾರ, ಜೂಲೈ 16, 2019
25 °C

ರಾಜೀನಾಮೆ ಹಿಂದಕ್ಕೆ ಪಡೆದ 9 ಭಿನ್ನಮತೀಯ ಸಚಿವರು

Published:
Updated:

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಶುಕ್ರವಾರ ರಾಜೀನಾಮೆ ನೀಡಿದ್ದ ಯಡಿಯೂರಪ್ಪ ಬಣದ 9 ಮಂದಿ ಸಚಿವರು ಸೋಮವಾರ ತಮ್ಮ ರಾಜೀನಾಮೆಗಳನ್ನು ಹಿಂಪಡೆದಿದ್ದಾರೆ.

ಸಂಪುಟದ 9 ಮಂದಿ ಸಚಿವರು ರಾಜೀನಾಮೆ ಪತ್ರಗಳನ್ನು ಮುಖ್ಯಮಂತ್ರಿಗೆ ಸ್ವತಃ ಸಲ್ಲಿಸಿದ್ದರು. ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ನೇತೃತ್ವದಲ್ಲಿ ರಾಜೀನಾಮೆ ನೀಡಿದ್ದ ಸಚಿವರು, ನಂತರ ಅದನ್ನು ಸ್ವೀಕರಿಸದಂತೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry