ರಾಜೀವ್ ರಾಮ್ ಜೊತೆಗೂಡಿ ಸೆಣಸಲಿರುವ ಬೋಪಣ್ಣ

7
ಚೆನ್ನೈ ಓಪನ್ ಟೆನಿಸ್ ಟೂರ್ನಿ

ರಾಜೀವ್ ರಾಮ್ ಜೊತೆಗೂಡಿ ಸೆಣಸಲಿರುವ ಬೋಪಣ್ಣ

Published:
Updated:

ಚೆನ್ನೈ (ಪಿಟಿಐ/ಐಎಎನ್‌ಎಸ್): ರೋಹನ್ ಬೋಪಣ್ಣ ಮುಂಬರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕ ಮೂಲದ ಆಟಗಾರ ರಾಜೀವ್ ರಾಮ್ ಜೊತೆಗೂಡಿ ಡಬಲ್ಸ್ ವಿಭಾಗದಲ್ಲಿ ಪೈಪೋಟಿ ನಡೆಸಲಿದ್ದಾರೆ.ಈ ಟೂರ್ನಿ ಡಿಸೆಂಬರ್ 31ರಿಂದ ಜನವರಿ 6ರವರೆಗೆ ನಡೆಯಲಿದೆ. ಈ ಮೊದಲು 2008ರಲ್ಲಿ ರಾಮ್ ಜೊತೆಗೂಡಿ ಕರ್ನಾಟಕದ ಬೋಪಣ್ಣ ಸೆಣಸಿದ್ದರು. ಆಗ ಈ ಜೋಡಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.ರೋಹನ್ ಇದುವರೆಗೆ ಮಹೇಶ್ ಭೂಪತಿ ಅವರ ಜೊತೆಗೂಡಿ ಆಡುತ್ತಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಕೂಡ ಒಟ್ಟಿಗೆ ಕಣಕ್ಕಿಳಿದಿದ್ದರು. ಆದರೆ 2013ರಿಂದ ಬೇರೆಯಾಗಿ ಆಡಲು ಈ ಜೋಡಿ ನಿರ್ಧರಿಸಿದೆ. ಇವರು ದುಬೈ ಹಾಗೂ ಪ್ಯಾರಿಸ್ ಓಪನ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದರು. ಇತ್ತೀಚೆಗಷ್ಟೇ ನಡೆದ ಲಂಡನ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದರು.`ರೋಹನ್ ಹಾಗೂ ರಾಜೀವ್ ಅತ್ಯುತ್ತಮ ಆಟಗಾರರು. ವಿಶ್ವದಲ್ಲೇ ಅತ್ಯುತ್ತಮ ಡಬಲ್ಸ್ ಜೋಡಿ ಎನಿಸಿಕೊಳ್ಳುವ ಸಾಮರ್ಥ್ಯ ಇವರಲ್ಲಿದೆ. ಈ ವರ್ಷದ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಇವರ ಮೇಲೆ ಭರವಸೆ ಇಟ್ಟುಕೊಳ್ಳಬಹುದು' ಎಂದು ಟೂರ್ನಿಯ ನಿರ್ದೇಶಕ ಟಾಮ್ ಅನಿಯರ್ ನುಡಿದಿದ್ದಾರೆ.

`ಈ ಟೂರ್ನಿ ಮೂಲಕ ಡಬಲ್ಸ್‌ನಲ್ಲಿ ಜೊತೆಗೂಡಿ ಆಡಲಿರುವ ರೋಹನ್ ಹಾಗೂ ರಾಜೀವ್ ಅವರನ್ನು ನಾವು ಸ್ವಾಗತಿಸಲಿದ್ದೇವೆ.ಅವರ ಹೊಸ ಪ್ರಯಾಣಕ್ಕೆ ನಮ್ಮ ಅಭಿನಂದನೆಗಳು' ಎಂದು ಟೂರ್ನಿಯ ಸಂಘಟನಾ ಸಮಿತಿ ಅಧ್ಯಕ್ಷ ಕಾರ್ತಿ ಚಿದಂಬರಂ ಹೇಳಿದ್ದಾರೆ. ಭೂಪತಿ ಕೂಡ ಈ ಟೂರ್ನಿಯಲ್ಲಿ ಆಡಲಿದ್ದು, ಅವರು ಕೆನಡಾದ ನೆಸ್ಟೋರ್ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ.ಯೂಟ್ಯೂಬ್‌ನಲ್ಲಿ ಟೆನಿಸ್: ಚೆನ್ನೈ ಓಪನ್ ಟೆನಿಸ್ ಟೂರ್ನಿಯು ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry