ರಾಜೀವ್ ವರಿಸಲು ಹೆತ್ತವರು ಒಪ್ಪಿರಲಿಲ್ಲ: ಸೋನಿಯಾ

7

ರಾಜೀವ್ ವರಿಸಲು ಹೆತ್ತವರು ಒಪ್ಪಿರಲಿಲ್ಲ: ಸೋನಿಯಾ

Published:
Updated:

ನವದೆಹಲಿ (ಐಎಎನ್‌ಎಸ್): ರಾಜೀವ್ ಗಾಂಧಿ ಅವರನ್ನು ತಾವು ಮದುವೆಯಾಗುವುದಕ್ಕೆ ತಮ್ಮ ಹೆತ್ತವರ ವಿರೋಧವಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕ್ಯಾಲಿಫೋರ್ನಿಯಾ ಗವರ್ನರ್ ಅವರ ಪತ್ನಿಗೆ ತಿಳಿಸಿದ್ದ ಮಾಹಿತಿಯನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.2006ರ ಆಗಸ್ಟ್‌ನಲ್ಲಿ ಸೋನಿಯಾ ಅವರು ಕ್ಯಾಲಿಫೋರ್ನಿಯಾದ ಗವರ್ನರ್ ಅರ್ನಾಲ್ಡ್ ಶೆವರ್ಜೆನೆಗರ್ ಅವರ ಪತ್ನಿ ಮಾರಿಯಾ ಶ್ರಿವೆರ್ ಅವರೊಂದಿಗೆ ದೆಹಲಿಯಲ್ಲಿ ಮಾತನಾಡುತ್ತಿದ್ದ ವೇಳೆ ಅವರು ಈ ವಿಷಯ ತಿಳಿಸಿದ್ದರು. ಜತೆಗೆ 2004ರಲ್ಲಿ ಪ್ರಧಾನಿ ಆಗುವ ಅವಕಾಶವನ್ನು ತಾವು ಯಾಕೆ ಕೈಚೆಲ್ಲಿರುವುದಾಗಿ ತಿಳಿಸಲು ಸಮಯ ಸಿಕ್ಕಾಗ ಪುಸ್ತಕವೊಂದನ್ನು ಬರೆಯುವುದಾಗಿ ಅವರು ಹೇಳಿದ್ದರು ಎಂಬ ರಾಜತಾಂತ್ರಿಕ ಗೋಪ್ಯ ದಾಖಲೆಗಳನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.ಹೆತ್ತವರ ವಿರೋಧ ಇದ್ದರೂ ತಾವು ರಾಜೀವ್ ಗಾಂಧಿ ಅವರನ್ನು ವರಿಸಿದ್ದಾಗಿ ಸೋನಿಯಾ ಹೇಳಿದ್ದಾರೆ. ಆದರೆ ಪ್ರಧಾನಿ ಸ್ಥಾನವನ್ನು ಕೈಬಿಟ್ಟಿದ್ದು ಯಾಕೆ ಎಂದು ಶ್ರಿವರ್ ಅವರು ಪದೇ ಪದೇ ಕೇಳಿದಾಗಲೂ ಅವರು ಯಾವುದೇ ಉತ್ತರ ನೀಡಿಲ್ಲ. ಬದಲಿಗೆ ತಾವು ಈ ಬಗ್ಗೆ ಪುಸ್ತಕವನ್ನು ಬರೆದು ಎಲ್ಲಾ ವಿಷಯವನ್ನು ಅದರಲ್ಲಿ ತಿಳಿಸುವುದಾಗಿ ಹೇಳಿದ್ದರು ಎಂಬುದು ಗೋಪ್ಯ ಮಾಹಿತಿಗಳಿಂದ ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry