ರಾಜೆ ಸೇರಿ ಹಲವರ ಬಂಧನ

ಭಾನುವಾರ, ಜೂಲೈ 21, 2019
27 °C

ರಾಜೆ ಸೇರಿ ಹಲವರ ಬಂಧನ

Published:
Updated:

ಜೈಪುರ (ಪಿಟಿಐ):  ಕಪ್ಪುಹಣಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿ ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ನೇತೃತ್ವದಲ್ಲಿ ವೆುರವಣಿಗೆ ನಡೆಸುತ್ತಿದ್ದ ಹಲವರನ್ನು ಬುಧವಾರ ಬಂಧಿಸಲಾಗಿದೆ.ಸುಮಾರು 300 ಕಾರ್ಯಕರ್ತರು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಪಕ್ಷದ ಕಚೇರಿಯಿಂದ ರಾಜಭವನಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದುಕೊಂಡರು.ಈ ಪ್ರದೇಶದಲ್ಲಿ ಮೆರವಣಿಗೆ ನಡೆಸಲು ಅನುಮತಿ ಇರಲಿಲ್ಲ. ಬಳಿಕ ರಾಜ್ಯಪಾಲರ ಭೇಟಿಗೆ ನಿಯೋಗವೊಂದನ್ನು ಕಳುಹಿಸುವಂತೆ ಕೋರಲಾಯಿತು. ಆದರೆ ಬಿಜೆಪಿಯ ಮುಖಂಡರು ಈ ಸಲಹೆಯನ್ನು ಒಪ್ಪಲಿಲ್ಲ ಎಂದು ಜೈಪುರದ ಪೊಲೀಸ್ ವರಿಷ್ಠಾಧಿಕಾರಿ ಜೋಸ್ ಮೋಹನ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry