ಮಂಗಳವಾರ, ಏಪ್ರಿಲ್ 20, 2021
30 °C

ರಾಜೇಶ್‌ಗೆ ಒಲಿದ ಮೀರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಂಡು ಮಲ್ಲಿಗೆಯಂತಹ ಹುಡುಗಿ ಮೀರಾ ಜಾಸ್ಮಿನ್ `ಐ ಆ್ಯಮ್ ಇನ್ ಲವ್ ವಿದ್ ರಾಜೇಶ್~ ಅಂತ ಹೇಳಿ ಎಲ್ಲರನ್ನು ಬೆಚ್ಚಿ ಬೀಳಿಸಿದ್ದಾರೆ.ಹೌದು, ಮೀರಾ ಈಗ ಖ್ಯಾತ ಮ್ಯಾಂಡೊಲಿನ್ ವಾದಕ ರಾಜೇಶ್ ಅವರ ಪ್ರೀತಿಗೆ ಮನಸೋತಿದ್ದಾರಂತೆ. ರಾಜೇಶ್ ಅವರ `ಫಾಲೋಯಿಂಗ್ ಮೈ ಆರ್ಟ್~ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಸ್ವತಃ ಮೀರಾ ಅವರೇ ಇದನ್ನು ಹೇಳಿಕೊಂಡಿದ್ದಾರೆ.`ಹೌದು, ನಾನು ಮತ್ತು ರಾಜೇಶ್ ಸ್ನೇಹಿತರಷ್ಟೇ ಅಲ್ಲ. ಅದನ್ನೂ ಮೀರಿದ ಒಂದು ಬಾಂಧವ್ಯ ನಮ್ಮ ಮಧ್ಯೆ ಇದೆ. ಈಗ ಪರಸ್ಪರ ಒಬ್ಬರನ್ನೊಬ್ಬರು ಉಸಿರುಕಟ್ಟುವಷ್ಟು ಪ್ರೀತಿಸಿಕೊಳ್ಳುತ್ತಿದ್ದೇವೆ.  ನಮ್ಮ ನಡುವಿನ ಪ್ರೀತಿಯನ್ನು ನನಗೆ ಪದಗಳಲ್ಲಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ~ ಎಂದು ಪ್ರೀತಿಯ ಸೋನೆ ಮಳೆ ಸುರಿಸುತ್ತಿದ್ದಾರೆ ಮೀರಾ.ಮದುವೆ ಯಾವಾಗ ಅಂತ ಕೇಳಿದರೆ, `ಮದುವೆ ದಿನಾಂಕ ಇನ್ನೂ ನಿಶ್ಚಯ ಆಗಿಲ್ಲ. ನಾನು ಗುಟ್ಟಾಗಿ ಏನೂ ಮದುವೆ ಆಗೋಲ್ಲ. ಒಂದು ದಿನ ನಾವಿಬ್ಬರೂ ಮದುವೆ ಆಗಿ ಇಡೀ ಜಗತ್ತಿಗೆ ಒಂದು ದೊಡ್ಡ ಶಾಕ್ ನೀಡುತ್ತೇವೆ~ ಎಂದು ಚೋಕ್ ಕೊಡುತ್ತಾರೆ.ಅಂತೂ ಇಂತೂ ಮೀರಾ ಜಾಸ್ಮಿನ್ ಪ್ರೀತಿಯ ಪುಳಕದಲ್ಲಿ ಮೀಯುತ್ತಿದ್ದರೆ, ಆಕೆಯ ಅಭಿಮಾನಿಗಳು ಮಾತ್ರ ಹೃದಯಕ್ಕೆ ಕಿಚ್ಚು ಹಚ್ಚಿಸಿಕೊಂಡು ಓಡಾಡುತ್ತಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.