ರಾಜೇಶ್ ಎಕ್ಸ್‌ಪೋರ್ಟ್ಸ್: ರೂ 761 ಕೋಟಿ ನಿವ್ವಳಲಾಭ

7

ರಾಜೇಶ್ ಎಕ್ಸ್‌ಪೋರ್ಟ್ಸ್: ರೂ 761 ಕೋಟಿ ನಿವ್ವಳಲಾಭ

Published:
Updated:

ಬೆಂಗಳೂರು: ರಾಜ್ಯದ ಪ್ರಮುಖ ಚಿನ್ನಾಭರಣ ವಹಿವಾಟು ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್ ಸೋಮವಾರ ಇಲ್ಲಿ  ಮೂರನೇ ತ್ರೈಮಾಸಿಕ ಅವಧಿಯ ಸಾಧನೆ ಪ್ರಕಟಿಸಿದ್ದು, ್ಙ 761 ಕೋಟಿ ಗಳಷ್ಟು ನಿವ್ವಳ ಲಾಭ ದಾಖಲಿಸಿದೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ನಂತರದ ಲಾಭ  ಶೇ 73ರಷ್ಟು ಹೆಚ್ಚಿದೆ. ಒಟ್ಟು ವರಮಾನ ಶೇ 14ರಷ್ಟು ಪ್ರಗತಿಯೊಂದಿಗೆ  ್ಙ 51,758 ದಶಲಕ್ಷಕ್ಕೆ ಏರಿದೆ. ಇದು ಇದುವರೆಗಿನ ತ್ರೈಮಾಸಿಕ ಸಾಧನೆಗಳಲ್ಲಿ  ಗರಿಷ್ಠ ಮಟ್ಟದ ದಾಖಲೆಯಾಗಿದ್ದು, ಆರ್ಥಿಕ ಹಿಂಜರಿತದ ಸಮಯದಲ್ಲಿ ಆಗಿದ್ದ ಎಲ್ಲಾ ನಷ್ಟಗಳನ್ನು ಈ ತ್ರೈಮಾಸಿಕ ಸಾಧನೆ ಮರುಭರ್ತಿ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಮೆಹ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘ಶುಭ್ ಜುವೆಲರಿ’ ಮೂಲಕ ಚಿನ್ನಾಭರಣಗಳ ಚಿಲ್ಲರೆ ವಹಿವಾಟು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಮೇ ತಿಂಗಳೊಳಗೆ ರಾಜ್ಯದಲ್ಲಿ 14 ಹಾಗೂ ಮುಂದಿನ ಮೂರು ವರ್ಷಗಳಲ್ಲಿ ದೇಶದಾದ್ಯಂತ 500ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ರಾಜೇಶ್ ಎಕ್ಸ್‌ಪೋರ್ಟ್ಸ್ ಹೊಂದಿದೆ. ಇದರಿಂದ ್ಙ 25 ಸಾವಿರ ಕೋಟಿ ವಹಿವಾಟು ನಿರೀಕ್ಷಿಸಲಾಗಿದೆ ಎಂದು ಮೆಹ್ತಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry