ರಾಜೋಳ್ಳಿಬಂಡಾ ಅಣೆಕಟ್ಟೆ: ನ.1ರವರೆಗೆ ನಿಷೇಧಾಜ್ಞೆ

7

ರಾಜೋಳ್ಳಿಬಂಡಾ ಅಣೆಕಟ್ಟೆ: ನ.1ರವರೆಗೆ ನಿಷೇಧಾಜ್ಞೆ

Published:
Updated:

ಮಾನ್ವಿ: ಆಂಧ್ರಪ್ರದೇಶದ ತೆಲಂಗಾಣ ಹಾಗೂ ರಾಯಲಸೀಮಾ ಭಾಗಗಳ ರೈತರ ನಡುವೆ ಭಾನುವಾರ ಸಂಘರ್ಷಕ್ಕೆ ಕಾರಣವಾಗಿದ್ದ ತಾಲ್ಲೂಕಿನ ರಾಜೋಳ್ಳಿಬಂಡಾ ಅಣೆಕಟ್ಟೆ ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ಅಕ್ಟೋಬರ್24 ರಿಂದ ನವೆಂಬರ್1ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಅಣೆಕಟ್ಟೆ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಸೋಮವಾರ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ ಹಿನ್ನೆಲೆಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಜಿಲ್ಲಾಧಿಕಾರಿ ವಿ.ಅನ್ಬುಕುಮಾರ, ಪ್ರಭಾರ ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ್, ಕಂದಾಯ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಣೆಕಟ್ಟೆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry