ರಾಜ್ಯಕ್ಕೆ ದ್ರೋಹ ಬಗೆದ ಕತ್ತಿ ಮಾತು

7

ರಾಜ್ಯಕ್ಕೆ ದ್ರೋಹ ಬಗೆದ ಕತ್ತಿ ಮಾತು

Published:
Updated:

ಗುಂಡ್ಲುಪೇಟೆ: ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆಯು ರಾಜ್ಯಕ್ಕೆ ದ್ರೋಹ ಮಾಡಿದಂತೆ ಎಂದು ಕರ್ನಾ ಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎಸ್. ಗುರು ಹೇಳಿದರು.ಕಾವಲು ಪಡೆಯ ಕಾರ್ಯಕರ್ತರು ಹಮ್ಮಿ ಕೊಂಡಿದ್ದ ಪ್ರತಿಭಟನಾ ಮೆರವ ಣಿಗೆಯ ನೇತೃತ್ವ ವಹಿಸಿ ಮಾತನಾಡಿ, ರಾಜ್ಯದ ಒಗ್ಗಟ್ಟಿಗೆ ಶ್ರಮಿಸಬೇಕಾದ ಸಚಿವರು ಈ ರೀತಿಯ ಹೇಳಿಕೆ ನೀಡುವುದರಿಂದ ಕನ್ನಡಿಗರಲ್ಲಿ ಒಡಕು ಮೂಡಿಸಿದಂತಾಗುತ್ತದೆ ಎಂದರು.ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ ಕೂಡಲೇ ಸಚಿವ ಉಮೇಶ್ ಕತ್ತಿಯ ರಾಜೀನಾಮೆಯನ್ನು ಪಡೆಯ ಬೇಕು ಹಾಗೂ ಸಚಿವರಿಂದ ಕ್ಷಮಾ ಪಣೆಯನ್ನು ರಾಜ್ಯದ ಜನರಲ್ಲಿ ಕೇಳುವಂತೆ ಮಾಡಬೇಕೆಂದು ಒತ್ತಾಯಿಸಿದರು.ಸಾರಿಗೆ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡ ಕಾರ್ಯಕರ್ತರು  ರಾಷ್ಟ್ರೀಯ ಹೆದ್ದಾರಿಯನ್ನು ಕೆಲಕಾಲ ತಡೆದು ಧರಣಿ ನಡೆಸಿದರು.ಯಾವುದೇ ಸಚಿವರಾದರೂ ರಾಜ್ಯದ ನೆಲ, ಜಲ, ಸಂಸ್ಕೃತಿಯ ಬಗ್ಗೆ ಕಾಳಜಿ ವಹಿಸಬೇಕು. ರಾಜ್ಯದ ಹಿತಾಸಕ್ತಿಗೆ ಧಕ್ಕೆ ನೀಡುವ ಹೇಳಿಕೆ ನೀಡ ಬಾರದು ಎಂದು ಹೇಳಿದರು.ಪದಾಧಿಕಾರಿಗಳಾದ ಗೌರವಾಧ್ಯಕ್ಷ ಮಣಿಸುಂದರ್, ಫಾರೂಕ್‌ಖಾನ್, ಉಪಾಧ್ಯಕ್ಷ ಎಂ.ಸಿ. ಶಂಕರ್, ಪ್ರಧಾನ ಕಾರ್ಯದರ್ಶಿ ಪ್ರಸಾದ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಮಂಜು, ಕೃಷ್ಣಸ್ವಾಮಿ, ಬೇಗೂರು ಹೋಬಳಿ ಘಟಕದ ಅಧ್ಯಕ್ಷ ಸುರೇಶ್, ಗೌರವಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ಅಶೋಕ್‌ರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರಪ್ರಸಾದ್ ಮುಂತಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry