ರಾಜ್ಯಕ್ಕೆ 15ನೇ ಸ್ಥಾನದಲ್ಲಿ ರಾಮನಗರ

7

ರಾಜ್ಯಕ್ಕೆ 15ನೇ ಸ್ಥಾನದಲ್ಲಿ ರಾಮನಗರ

Published:
Updated:

ರಾಮನಗರ: ಪ್ರಸಕ್ತ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 9047 ವಿದ್ಯಾರ್ಥಿಗಳ ಪೈಕಿ 5138 (ಶೇ 56.79) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ರಾಜ್ಯದಲ್ಲಿ 15ನೇ ಸ್ಥಾನ ಅಲಂಕರಿಸಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಎಂ.ಚಲುವಪ್ಪ ತಿಳಿಸಿದರು.ಹೊಸದಾಗಿ ಪರೀಕ್ಷೆ ಬರೆದ 6776 ವಿದ್ಯಾರ್ಥಿಗಳ ಪೈಕಿ 4593 (ಶೇ67.78) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಈ ಬಾರಿಯೂ ಬಾಲಕಿಯರು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಎದುರಿಸಿದ್ದ 4413 ಬಾಲಕಿಯರ ಪೈಕಿ 2904 (ಶೇ 65.80) ಹಾಗೂ 4636 ಬಾಲಕರ ಪೈಕಿ 2234 (ಶೇ 48.19) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಅವರು ವಿವರಿಸಿದರು.

2597 ಗ್ರಾಮೀಣ ಪರೀಕ್ಷಾರ್ಥಿಗಳಲ್ಲಿ 1540 (ಶೇ 59.3) ಹಾಗೂ 6450 ನಗರ ಪ್ರದೇಶದ ಪರೀಕ್ಷಾರ್ಥಿಗಳಲ್ಲಿ 3398 (ಶೇ 55.78) ತೇರ್ಗಡೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ವಾಣಿಜ್ಯ ವಿಭಾಗದ ಮೇಲುಗೈ: ಈ ಬಾರಿಯ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2767 ವಿದ್ಯಾರ್ಥಿಗಳಲ್ಲಿ 1900 (ಶೇ 68.62) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹೊಸದಾಗಿ ಈ ವರ್ಷ ಪರೀಕ್ಷೆ ಬರೆದ 2242 ವಿದ್ಯಾರ್ಥಿಗಳಲ್ಲಿ 1740 (ಶೇ 77.6) ಮಂದಿ ಉತ್ತೀರ್ಣರಾಗಿದ್ದಾರೆ ಎಂದು ವಿವರಿಸಿದರು.ಕಲಾ ವಿಭಾಗದ ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ಬರೆದ 4611 ವಿದ್ಯಾರ್ಥಿಗಳಲ್ಲಿ 2435 (ಶೇ 52.31) ಮಂದಿ ಪಾಸಾಗಿದ್ದಾರೆ. 3288 ಹೊಸ ವಿದ್ಯಾರ್ಥಿಗಳಲ್ಲಿ 2119 (64.45) ಮಂದಿ ಉತ್ತೀರ್ಣರಾಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 1667 ವಿದ್ಯಾರ್ಥಿಗಳಲ್ಲಿ 803 (ಶೇ 48.17) ವಿದ್ಯಾರ್ಥಿಗಳು ಪಾಸಾಗಿದ್ದು, 1246 ಹೊಸ ವಿದ್ಯಾರ್ಥಿಗಳ ಪೈಕಿ 734 (ಶೇ 58.9) ಮಂದಿ ತೇರ್ಗಡೆ ಹೊಂದಿದ್ದಾರೆ ಎಂದು ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ನಾಲ್ಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಶೇ 100ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿವೆ. ಸುಗ್ಗನಹಳ್ಳಿ, ಬನ್ನಿಕುಪ್ಪೆ, ಲಕ್ಷ್ಮೀಪುರ ಹಾಗೂ ಬಿಜ್ಜಹಳ್ಳಿಯ ಸರ್ಕಾರಿ ಕಾಲೇಜುಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry