ಬುಧವಾರ, ಮೇ 25, 2022
30 °C
ಯುಜಿಸಿ: ಅಧ್ಯಾಪಕರ ವೇತನ, ನಿವೃತ್ತಿ ವಯಸ್ಸು ನಿರ್ಧಾರ

ರಾಜ್ಯಗಳ ವಿವಿಗೆ ಕಡ್ಡಾಯವೇನಲ್ಲ:ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಧ್ಯಾಪಕರ ವೇತನ ಶ್ರೇಣಿ ಹಾಗೂ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿರುವ ನಿಯಮಾವಳಿಗಳನ್ನು ರಾಜ್ಯಗಳು ನಡೆಸುವ ವಿಶ್ವವಿದ್ಯಾಲಯಗಳು ಪಾಲಿಸಬೇಕು ಎಂದೇನೂ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.ಯುಜಿಸಿ ಶಿಫಾರಸುಗಳನ್ನು ರಾಜ್ಯಗಳ ವಿಶ್ವವಿದ್ಯಾಲಯಗಳ ಮೇಲೆ ನೇರವಾಗಿ ಅನ್ವಯ ಮಾಡುವಂತಿಲ್ಲ, ಈ ಕುರಿತು ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರಿದ್ದ  ಪೀಠ ಹೇಳಿದೆ.`ಈ ಕುರಿತು ಯಾವುದೇ ದ್ವಂದ್ವಾ ರ್ಥ ಇಲ್ಲ. ಶಿಕ್ಷಕರ ನಿವೃತ್ತಿ ವಯಸ್ಸು ನಿರ್ಧರಿಸಬೇಕಾದದ್ದು ಆಯಾ ರಾಜ್ಯ ಸರ್ಕಾರಗಳು. ಯುಜಿಸಿ ನಿಯಮಾ ವಳಿಗಳನ್ನು ರೂಪಿಸಬಹುದಾದರೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯಗಳೂ ಶಾಸನಗಳನ್ನು ಜಾರಿಗೆ ತರಬಹು ದಾಗಿದೆ' ಎಂದು ಪೀಠ ತಿಳಿಸಿದೆ.ಯುಜಿಸಿ ನಿರ್ದೇಶನಗಳನ್ನು ಪಾಲಿ ಸುವ ಸಂಬಂಧ ವಿವಿಧ ರಾಜ್ಯಗಳು ಹಾಗೂ ಹಲವು ಶಿಕ್ಷಕರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದಕೋರ್ಟ್ ಈ ತೀರ್ಪು ನೀಡಿತು.`ನಮ್ಮ ಪ್ರಕಾರ ಈ ವಿಷಯದಲ್ಲಿ ರಾಜ್ಯಗಳು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳುವ ಮೊದಲೆ ಯುಜಿಸಿ ಯ ಶಿಫಾರಸುಗಳು ತನ್ನಿಂದತಾನೆ ಅನುಷ್ಠಾನಕ್ಕೆ ಬರಲಾರವು. ಇಂತಹ ಶಿಫಾರಸುಗಳನ್ನು ಜಾರಿಗೆ ತರುವುದ ಕ್ಕಿಂತ ಮೊದಲು ಹಣಕಾಸು ಲಭ್ಯತೆ ಮತ್ತಿತರ ಸ್ಥಿತಿಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಕೋರ್ಟ್ ತಿಳಿಸಿದೆ.ಆದಾಗ್ಯೂ ತನ್ನ ಶಿಕ್ಷಣ ಸಂಸ್ಥೆಗಳ ಮೇಲೆ ಯಾವುದೇನಿರ್ಬಂಧ ವಿಧಿಸು ವುದಕ್ಕೆ ಯುಜಿಸಿಗೆ ಹಕ್ಕಿಲ್ಲ ಎಂಬ ರಾಜ್ಯ ಸರ್ಕಾರಗಳ ವಾದವನ್ನು ಕೋರ್ಟ್ ತಳ್ಳಿಹಾಕಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.